Thursday, January 23, 2025
ಸುದ್ದಿ

ಮದುವೆ ಮಂಟಪವೇರಿದ ವರ ಫುಲ್ ಟೈಟ್ : ಅಮಲಿನಲ್ಲಿ ತೇಲಾಡಿ ನಿದ್ರೆಗೆ ಜಾರಿಯೇ ಬಿಟ್ಟ..! – ಕಹಳೆ ನ್ಯೂಸ್

ಮದುವೆ ದಿನವೇ ವರ ಕಂಠಪೂರ್ತಿ ಕುಡಿದು ಅಮಲೇರಿಸಿಕೊಂಡು ನಿದ್ದೆಗೆ ಜಾರಿದ ಘಟನೆ ಅಸ್ಸಾಂನ ನಲ್ಬರಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆ ದಿನ ವರ ಮದುವೆ ಮಂಟಪಕ್ಕೆ ಕುಡಿದುಕೊಂಡು ಬಂದಿದ್ದಾನೆ. ಅರ್ಚಕರು ಮದುವೆ ಶಾಸ್ತ್ರವನ್ನು ಹೇಳಿಕೊಡುತ್ತಿದ್ದರೆ ವರ ಫುಲ್ ಟೈಟ್ ಆಗಿ ಮಂತ್ರ ಕೇಳಿಸಿಕೊಳ್ಳೋದು ಬಿಡಿ, ತನ್ನನ್ನ ತಾನೂ ಕಂಟ್ರೋಲ್ ಮಾಡಿಕೊಳ್ಳಲಾಗದೆ ಅಮಲಿನಲ್ಲಿ ತೇಲಾಡಿದ್ದಾನೆ.. ಕೊನೆಗೆ ಅಲ್ಲಿಯೇ ನಿದ್ರೆಗೆ ಜಾರಿದ್ದಾನೆ.

ಇವೆಲ್ಲವನ್ನ ಗಮನಿಸಿದ ಮಧು ಆತನನ್ನು ಮದುವೆಯಾಗಲಾರೆ ಎಂದು ಕಣ್ಣೀರಿಟ್ಟಿದ್ದಾಳೆ. ಕೊನೆಗೆ ವಿವಾಹ ರದ್ದು ಮಾಡಿದ್ದಾಳೆ. ಮಾತ್ರವಲ್ಲದೆ ಅಲ್ಲಿನ ನಲ್ಬರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿದ್ದಾರೆ. ಅಲ್ಲದೆ ವಧುವಿನ ಕುಟುಂಬ ಮದುವೆಗೆ ಮಾಡಿದ ಖರ್ಚಿನ ಹಣವನ್ನ ವರನ ಕಡೆಯವರು ವಾಪಸ್ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.