Thursday, January 23, 2025
ಸುದ್ದಿ

ತನ್ನನ್ನೇ ತಾನು ವಿವಾಹವಾದ ಯುವತಿ : 24 ಗಂಟೆಯ ಒಳಗೆ ಡಿವೋರ್ಸ್..! –ಕಹಳೆ ನ್ಯೂಸ್

ಯುವತಿಯೊಬ್ಬಳು ತನ್ನನ್ನೇ ತಾನು ವಿವಾಹವಾಗಿ 24 ಗಂಟೆಯ ಒಳಗೆ ಮತ್ತೆ ಡಿವೋರ್ಸ್ ನೀಡಿ, ಏನಮ್ಮ ನಿನ್ ಕಥೆ..? ಅನ್ನೋವಂತೆ ಮಾಡಿದ್ದಾಳೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಜೆರ್ಂಟೀನಾ ದೇಶದ 25ರ ಯವೌನದ ಸುಂದರಿ ಸೋಫಿ ಮೌರ್ ಎಡವಟ್ಟು ಮಾಡಿಕೊಂಡವಳು.. ಈಕೆ ಫೆಬ್ರವರಿ 20ರಂದು ತನ್ನನ್ನು ತಾನೇ ವಿವಾಹವಾಗಿದ್ದಾಳೆ. ಈ ಬಗ್ಗೆ ತನ್ನ ಟ್ವಿಟರ್ ಅಕೌಂಟ್‍ನಲ್ಲಿ ಫೆÇೀಟೋಗಳನ್ನ ಶೇರ್ ಮಾಡಿ ತನ್ನ ಫ್ಯಾನ್ಸ್ ಹಾಗೂ ಫಾಲೋವಸ್ರ್ಗೆ ನನ್ನನ್ನು ನಾನೇ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾಳೆ.

ಬಿಳಿ ಬಣ್ಣದ ಗೌನ್ ಡ್ರೆಸ್ ಹಾಕಿಕೊಂಡು ತಲೆ ಮೇಲೆ ಗೋಲ್ಡ್ ಕಲರ್ ಕಿರೀಟ ಧರಿಸಿಕೊಂಡು ವಧುವಾಗಿ ತನ್ನನ್ನ ತಾನೇ ವರಿಸಿಕೊಂಡಿದ್ದಾಳೆ. ನಂತರ ಕೇಕ್ ಕಟ್ ಮಾಡಿ ಸಂಭ್ರಮಸಿದ್ದಾಳೆ. ಮರುದಿನ ಫೆಬ್ರವರಿ 21ರಂದು ‘ನನ್ನನ್ನು ನಾನೇ ಮದುವೆಯಾಗಿರುವುದು ಸಹಿಸಿಕೊಳ್ಳಲು ಆಗದೇ ಡಿವೋರ್ಸ್ ನೀಡಿದ್ದೇನೆ. ಇದನ್ನು ಮತ್ತೆ ಪಡೆಯಲಾಗಲ್ಲ’ ಎಂದು ಚೆಲುವೆ ಟ್ವಿಟ್ ಮಾಡಿದ್ದಾಳೆ.

ತನ್ನನ್ನ ತಾನೇ ವಿವಾಹವಾಗೋದು ಅಂದರೆ ಏನು..? ಇವೆಲ್ಲ ಅವಾಂತರಗಳು ಬೇಕಾ..? ಎಂದು ಹಲವರು ಕಮೆಂಟ್ ಮಾಡ್ತಾ ಇದ್ದು.. ಮದುವೆ ಅಂದ್ರೆ ಹೀಗೆಲ್ಲ ಇದ್ಯಾ ಅಂತ ಇನ್ನು ಕೆಲವರು ಹುಬ್ಬೇರಿಸಿದ್ದಾರೆ.