Thursday, January 23, 2025
ಸುದ್ದಿ

ಯಶಸ್ವಿಯಾಗಿ ನಡೆದ ಮಹಾದೇವ ಮಿತ್ರ ಮಂಡಳಿ(ರಿ.)ಕಂಚಿಲ MFC ಟ್ರೋಫಿ ಮ್ಯಾಟ್ ಕಬಡ್ಡಿ ಪಂದ್ಯಾಟ; ಲಕ್ಕಿ ಕೂಪನ್ ಡ್ರಾ –ಕಹಳೆ ನ್ಯೂಸ್

ಮಹಾದೇವ ಮಿತ್ರ ಮಂಡಳಿ(ರಿ.)ಕಂಚಿಲ ವತಿಯಿಂದ MFCಟ್ರೋಫಿ, 62KG ವಿಭಾಗದ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಕಂಚಿಲದಲ್ಲಿ ಯಶಸ್ವಿಯಾಗಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಬಡ್ಡಿ ಪಂದ್ಯಾಟದಲ್ಲಿ ಜಿಎಫ್‍ಜಿ ನೀರಪಾದೆ ಪ್ರಥಮ ಸ್ಧಾನವನ್ನ ಗೆದ್ದು, 8001 ನಗದು ಹಾಗೂ MFC ಟ್ರೋಫಿ ತನ್ನದಾಗಿಸಿಕೊಂಡಿದೆ. ಇನ್ನು ದ್ವಿತೀಯ ಭರತ್ ಫ್ರೆಂಡ್ಸ್ ಇರಾ ಗೆದ್ದು 5001 ಹಾಗೂ MFC ಟ್ರೋಫಿ ,ತೃತೀಯ ನವಯುಗ ಕುಕ್ಕಾಜೆ 2001 ಹಾಗೂ MFC ಟ್ರೋಫಿ, ಚತುರ್ಥ ಎಮ್‍ಎಫ್‍ಸಿ ಕಂಚಿಲ 2001 ಹಾಗೂ MFC ಟ್ರೋಫಿಯನ್ನ ಪಡೆದುಕೊಂಡಿದೆ. ಇನ್ನು ಆಲ್ ರೌಂಡರ್ ಆಗಿ ಮಣಿಕಂಠ, ಬೆಸ್ಟ್ ರೈಡರ್ ರೂಪೇಶ್, ಪುರುಷೋತಮ್ ಬೆಸ್ಟ್ ಡಿಪೆಂಡರ್ ಆಗಿ ಮಿಂಚಿದ್ದಾರೆ.
ಕಬಡ್ಡಿ ಪಂದ್ಯಾಟದ ಅಂಗವಾಗಿ ಲಕ್ಕಿ ಕೂಪನ್ ಆಯೋಜನೆ ಮಾಡಲಾಗಿತ್ತು. ಮೂರು ಬಹುಮಾನಗಳನ್ನು ಹಾಗೂ 5 ಜನರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಆಯೋಜಕರಿಂದ ಘೋಷಣೆಯಾಗಿತ್ತು.

ಇದೀಗ ಲಕ್ಕಿ ಡ್ರಾ ನಡೆದು ಫಲಿತಾಂಶ ಹೊರಬಿದ್ದಿದೆ. ತಮ್ಮ ಅದೃಷ್ಟದ ಮೂಲಕ ಪ್ರಥಮ ಸ್ಥಾನ ಕೂಪನ್ ನಂಬರ್ 9949, ದ್ವಿತೀಯ ಸ್ಥಾನ ಕೂಪನ್ ನಂಬರ್ 7335 ತೃತೀಯ ಸ್ಥಾನ ಕೂಪನ್ ನಂಬರ್ 0285 ಪಡೆದುಕೊಂಡಿದ್ದಾರೆ. ಇನ್ನೂ ಆಕರ್ಷಕ ಬಹುಮಾನಗಳನ್ನು ಕೂಪನ್ ಸಂಖ್ಯೆ 6393, 7176, 9846, 7138, 6461 ತಮ್ಮದಾಗಿಸಿಕೊಂಡಿದ್ದಾರೆ.