Saturday, November 23, 2024
ಸುದ್ದಿ

ಧರ್ಮ ಸಂಸದ್ 2018 : ಯೋಗಿಗಳ ಜಾತ್ರೆಗೆ ಸಾಕ್ಷಿಯಾಯಿತು ಕನ್ಯಾಡಿ ಶ್ರೀ ರಾಮ ಕ್ಷೇತ್ರ ; ಸಾಧುಸಂತರು, ಯತಿವರ್ಯರು , ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರ ಸಂಗಮ – ಕಹಳೆ ನ್ಯೂಸ್

ಮಂಗಳೂರು, ಸೆ 3 : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿರುವ ಧರ್ಮ ಸಂಸದ್ ಉದ್ಘಾಟನೆಗೂ ಮುನ್ನಾ ವೈಭವದ ಶೋಭಯಾತ್ರೆ ನಡೆಯಿತು. ಈ ಮೆರವಣಿಗೆಯಲ್ಲಿ ಸಾಧುಸಂತರು, ಯತಿವರ್ಯರು , ಮಹಾಮಂಡಲೇಶ್ವರರು, ಧರ್ಮ ಪೀಠಾಧೀಶ್ವರರು ಸೇರಿದಂತೆ ಸಾವಿರಾರು ಮಂದಿ ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀ ರಾಮ ಕ್ಷೇತ್ರ ಕನ್ಯಾಡಿಯಲ್ಲಿ ಮೇಳೈಸಲಿದೆ ಐತಿಹಾಸಿಕ ಧರ್ಮ ಸಂಸದ್‌ ಲೈವ್ ! – ಕಹಳೆ ನ್ಯೂಸ್

https://youtu.be/i0dC-_XDAHg

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಬಳಿಕ ರಾಷ್ಟ್ರೀಯ ಧರ್ಮ ಸಂಸದ್ ನ್ನು ಹರಿದ್ವಾರದ ಜುನಾ ಅಖಾಡದ ಮಹಾಮಂಡಲೇಶ್ವರ ಮಹಾಂತ ದಯಾನಂದ ಸರಸ್ವತಿ ಸೋಮವಾರ ಉದ್ಘಾಟಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ವಿವಿಧ ಮಠಗಳ ಸ್ವಾಮೀಜಿಗಳು, ಹಲವು ಅಖಾಡಗಳ ಮಹಾಂತರು, ನಾಥ ಪಂಥದ ಸ್ವಾಮೀಜಿಗಳು, ನಾಗಾ ಸಾಧುಗಳು ಸೇರಿದಂತೆ ನೂರಕ್ಕೂ ಹೆಚ್ಚು ಸಾಧು, ಸಂತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ಕ್ಷೇತ್ರಗಳ ಮಹಾಮಂಡಲೇಶ್ವರರು ಸಾಧು ಸಂತರು ನಾಗಾ ಸಾಧುಗಳು ಹಾಗೂ ಹಠಯೋಗಿಗಳು. ಅಘೋರಿಗಳು ಸೇರಿದಂತೆ ನಾಥ ಪಂಥ ಹಾಗೂ ಸೀತಾರಾಮ ಪರಂಪರೆಯ ಬಹುತೇಕ ಸಾಧುಗಳು ಹೀಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಸಂತರು ಭಾಗವಹಿಸಿದ್ದು ಕನ್ಯಾಡಿ ಕೇಸರಿ ಬಣ್ಣದಲ್ಲಿ ರಂಗೇರಿದೆ.