Thursday, January 23, 2025
ಸುದ್ದಿ

ಕಲ್ಲಡ್ಕ: ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಯುವಕ – ಕಹಳೆ ನ್ಯೂಸ್

ಕಲ್ಲಡ್ಕ : ಕಾರಿನೊಳಗೆ ವ್ಯಕ್ತಿಯೋರ್ವನು ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.ಗೋಳ್ತಮಜಲು ಗ್ರಾಮದ ಹೊಸೈಮಾರ್ ನಿವಾಸಿ ಜಗದೀಶ್ ಮೃತಪಟ್ಟ ಯುವಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಗದೀಶ್ ವೃತ್ತಿಯಲ್ಲಿ ಚಾಲಕನಾಗಿದ್ದು , ಕಳೆದ ಕೆಲವು ವರ್ಷಗಳ ಹಿಂದೆ ವಿಡಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಬೆಳಿಗ್ಗೆ ಬಾವನ ಜೊತೆ ಬೆಳಿಗ್ಗೆ ತರವಾಡು ಮನೆಯಲ್ಲಿ ದೈವದ ಕಾರ್ಯಕ್ಕೆ ಮಕ್ಕಳ ಜೊತೆ ಹೋಗಿದ್ದರು. ವಾಪಾಸು ಮನೆಗೆ ಬರುವ ವೇಳೆ ಕಲ್ಲಡ್ಕ ತಲುಪಿದಾಗ ಸುಮಾರು 1.30 ಗಂಟೆಗೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ ಎಂದು ಬಾವನಲ್ಲಿ ಹೇಳಿದ್ದು ನಾನು ಮತ್ತೆ ಮನೆಗೆ ಬರುತ್ತೇನೆ ನೀವು ಮಕ್ಕಳ ಜೊತೆ ಮನೆಗೆ ಹೋಗಿ ಎಂದು ಕಳುಹಿಸಿ, ಕಾರಿನ ಸೀಟಿನಲ್ಲಿಯೇ ಮಲಗಿದ್ದರು.

ಆದರೆ ರಾತ್ರಿ 7 ಗಂಟೆಯಾದರೂ ಈತ ಮನೆಗೆ ಬಾರದ ಹಿನ್ನೆಲೆಯಲ್ಲಿ ಮತ್ತೆ ಬಂದು ನೋಡಿದಾಗ ಕಾರಿನ ಸೀಟಿನಲ್ಲಿ ಕುಳಿತು ಮಲಗಿದ ಸ್ಥಿತಿಯಲ್ಲಿರುವುದು ಹೊರಗಿನಿಂದ ಕಂಡುಬAದಿದೆ.

ಕಾರಿನ ಗ್ಲಾಸ್ ಹಾಕಿ ಮಲಗಿದ್ದರಿಂದ ಕಾರಿನ ಡೋರ್ ಓಪನ್ ಮಾಡಿದಾಗ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.

ಕಾರಿನ ಕಿಟಕಿ ,ಬಾಗಿಲನ್ನು ಮುಚ್ಚಿ ಮಲಗಿದ್ದರಿಂದ ಗಾಳಿ ಇಲ್ಲದೆ ಸಾವನ್ನಪ್ಪಿರುವುದೇ? ಅಥವಾ ಇನ್ನಾವುದೇ ಕಾಯಿಲೆಯಿಂದ ಮೃತಪಟ್ಟಿದ್ದಾನಾ? ಎಂಬುದು ವೈದ್ಯಕೀಯ ರಿಪೋರ್ಟ್ ಹಾಗೂ ಪೊಲೀಸ್ ತನಿಖೆಯ ಬಳಿಕ ತಿಳಿಯಬೇಕಾಗಿದೆ.