Thursday, January 23, 2025
ಸುದ್ದಿ

ಚೀನಾದಲ್ಲಿ ಆಕಾಶದಿಂದ ಬೀಳುತ್ತಿದೆ ರಾಶಿ ರಾಶಿ ಕಂಬಳಿ ಹುಳು..! -ಕಹಳೆ ನ್ಯೂಸ್

ಕೊರೋನಾ ಮಹಾಮಾರಿಯನ್ನ ಹಬ್ಬಿಸಿ, ವಿಶ್ವದಾದ್ಯಂತ ಸಂಕಷ್ಟಕವನ್ನ ತಂದಿಟ್ಟ ಚೀನಾ ಇದೀಗ ಹುಳುಗಳ ಬಾಧೆಯಿಂದ ತತ್ತರಿಸುವಂತಾಗಿದೆ. ಚೀನಾದಲ್ಲಿ ಆಕಾಶದಿಂದ ಮಳೆಯಾಗುವ ಬದಲು ಹುಳುಗಳ ಮಳೆ ಸುರಿಯುತ್ತಿದೆ. ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲು ಸಾಲಾಗಿ ನಿಂತಿರುವ ಕಾರುಗಳ ಮೇಲೆ ಕಂಬಳಿ ಹುಳದ ರೀತಿಯಲ್ಲಿ ಒಂದು ಅಡಿಯ ಉದ್ದನೆಯ ವಿಚಿತ್ರ ರೀತಿಯ ಹುಳುಗಳು ರಾಶಿ ರಾಶಿಯಾಗಿ ಬಿದ್ದಿವೆ. ಹುಳುಗಳು ಬಿದ್ದಿರುವುದನ್ನು ಕಂಡ ಚೀನಾ ಜನ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ತಿಳಿದು ಬಂದಿಲ್ಲ.