Monday, January 27, 2025
ಸುದ್ದಿ

ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಬಳಿ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸಗೊಳಿಸಿದ ಶಾಸಕ ಭರತ್ ಶೆಟ್ಟಿ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

1 ಕೋಟಿ ರೂ.ವೆಚ್ಚದಲ್ಲಿ ಸುರತ್ಕಲ್ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ಬಳಿ ಇರುವ ಕೆರೆಯನ್ನು ಅಭಿವೃದ್ಧಿ ಪಡಿಸಿ ಅಂತರ್ಜಲ ಹೆಚ್ಚಳಕ್ಕೆ ಪೂರಕ ಕ್ರಮ ಕೈಗೊಳ್ಳುವ ಕಾಮಗಾರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.

ಮುಡಾ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಸ್ಥಳೀಯ ಮನಪಾ ಸದಸ್ಯೆ ಶ್ವೇತಾ ಪೂಜಾರಿ, ಸುರತ್ಕಲ್ ಶ್ರೀಸದಾಶಿವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಪ್ರೋ. ಗಣಪತಿ ಮಯ್ಯ, ಮಹೇಶ್ ಮಯ್ಯ, ಮನಪಾ ಸದಸ್ಯೆ ನಯನ ಆರ್ ಕೋಟ್ಯಾನ್, ಮುಡಾ ಸದಸ್ಯೆ ಕವಿತಾ ಪೈ, ಯುವಮೋರ್ಚಾ ಅಧ್ಯಕ್ಷ ಭರತ್‍ರಾಜ್ ಕೃಷ್ಣಾಪುರ, ಬೂತ್ ಅಧ್ಯಕ್ಷ ಸಂತೋಷ್ ತಡಂಬೈಲ್, ಮಿಥುನ್ ದಾಸ್ ಭಂಡಾರಕಾರ್, ಪ್ರಶಾಂತ್ ಶೆಟ್ಟಿ, ವಿಶ್ವನಾಥ, ವೀಣಾ, ಸದಾನಂದ್, ಜಯ ಸನಿಲ್, ರಮೇಶ್ ಶೆಟ್ಟಿ, ಕೋಶಾಧಿಕಾರಿ ಪುಷ್ಪರಾಜ್ ಮುಕ್ಕ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಅಂಚನ್, ಕಾರ್ಯಕರ್ತರು ಉಪಸ್ಥಿತರಿದ್ದರು