Saturday, January 25, 2025
ಸುದ್ದಿ

ಕಟ್ಟಡದ ಮೇಲಿಂದ ಬಿದ್ದು ಮಗು ಸಾವು –ಕಹಳೆ ನ್ಯೂಸ್

ಕಟ್ಟಡದ ಮೇಲಿಂದ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಚಾಮರಾಜಪೇಟೆಯ ಆಜಾದ್ ನಗರದ 6 ನೇ ಕ್ರಾಸ್ ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದೂವರೆ ವರ್ಷದ ದೀಕ್ಷಾ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿದ ಮಗು. ವಿನಯ್ ದಂಪತಿಗಳು, ಪುತ್ರಿ ದೀಕ್ಷಾಳೊಂದಿಗೆ ತಮ್ಮ ಸ್ನೇಹಿತನ ಮನೆಗೆ ಹೋಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ತಾಯಿ ಊಟ ಮಾಡಿಸುತ್ತಿದ್ದ ವೇಳೆ ಆಟವಾಡುತ್ತ ದೀಕ್ಷಾ ಗ್ರಿಲ್ಸ್ ಹತ್ತಿದ್ದಾಳೆ. ನೋಡ ನೋಡುತ್ತಿದ್ದಂತೆ ಜಾರಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆಯಿತಾದರೂ, ಮಾರ್ಗ ಮಧ್ಯೆ ದೀಕ್ಷಾ ಕೊನೆಯುಸಿರೆಳೆದಿದ್ದಾಳೆ. ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.