Friday, January 24, 2025
ಸುದ್ದಿ

ಮೆಲ್ಕಾರ್ ಜಂಕ್ಷನ್ ಅಕ್ರಮ ಕಟ್ಟಡ ತೆರವಿಗೆ ಡಿಸಿ ಆದೇಶ : ಕೆಲ ಅಂಗಡಿಗಳನ್ನ ಮಾತ್ರ ತೆರವುಗೊಳಿಸಿದ ಪುರಸಭೆ ವಿರುದ್ಧ ಸಾರ್ವಜನಿಕರ ಕಿಡಿ – ಕಹಳೆ ನ್ಯೂಸ್

ಮೆಲ್ಕಾರ್ ಜಂಕ್ಷನ್‌ನಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನ ತೆರವುಗೊಳಿಸಲು ಹೈ ಕೋರ್ಟ್ ಆದೇಶದಂತೆ ಡಿಸಿಯವರು ಸೂಚನೆಯನ್ನ ಹೊರಡಿಸಿದ್ದಾರೆ. ಆ ಆದೇಶದಂತೆ ಬಂಟ್ವಾಳ ಪುರಸಭೆ ಕಾರ್ಯಚರಣೆಗೆ ಮುಂದಾಗಿದ್ದು, ಕೆಲವು ತಗಡು ಶೀಟಿನ ಅಂಗಡಿಗಳನ್ನ ತೆರವುಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಅಕ್ರಮ ಮೀನಿನ ಅಂಗಡಿ, ಚಿಕನ್ ಅಂಗಡಿ, ಶಾವರ್ಮ ಹೋಟೆಲ್ ಇಂತಹ ಕೆಲವು ಅಂಗಡಿಗಳನ್ನು ಇನ್ನೂ ತೆರವು ಮಾಡಿಲ್ಲ. ಇನ್ನು ರಸ್ತೆಯಲ್ಲೀ ಹಸಿ ಮೀನಿನ ವ್ಯಾಪಾರ ನಡೀತಾ ಇದ್ದು, ಅದರಲ್ಲಿ ಬರುವ ಕೊಳಚೆ ನೀರನ್ನು ಮಾರ್ಗಕ್ಕೆ ಬಿಟ್ಟು ಇದರಿಂದ ದುರ್ವಸನೆ ಹರಡುತ್ತಿದೆ. ಅದರಿಂದ ಅರೋಗ್ಯಕ್ಕೂ ಕೂಡ ಹಾನಿ ಉಂಟಾಗುತ್ತದೆ. ಮುನ್ಸಿಪಾಲಿಟಿ ಅಧಿಕಾರಿಗಳು ಯಾರದ್ದೋ ಒತ್ತಡಕ್ಕೆ ಮಣಿದು ಕೆಲ ಅಂಗಡಿಗಳನ್ನ ಮಾತ್ರ ತೆರವುಗೊಳಿಸಿದರೇ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಪುರಸಭೆ ಮಾಡಿದ ಘಟನೆಯಿಂದ ನೊಂದ ಸರ್ವಾಜನಿಕರು, ಇದೀಗ ಡಿಸಿಯವರನ್ನ ಭೇಟಿಯಾಗಿದ್ದಾರೆ. ಡಿಸಿಯವರ ಆದೇಶವನ್ನು ಪಾಲನೆ ಮಾಡದಿದ್ದ ಅಧಿಕಾರಿಗಳ ಮೇಲೆ ದೂರು ನೀಡಿ, ತಕ್ಷಣ ಉಳಿದ ಅಂಗಡಿಗಳನ್ನು ತೆರವುಗೊಳಿಸಿ ಮೆಲ್ಕಾರ್ ಜಂಕ್ಷನನ್ನು ಸ್ವಚ್ಛ ಮಾಡಿ ಕೊಡಲು ವಿನಂತಿಸಿದ್ದಾರೆ