Friday, September 20, 2024
ಸುದ್ದಿ

ಅಕ್ರಮ ಚಿನ್ನಾಭರಣ ಸಾಗಾಟ ; ಕಾಸರಗೋಡಿನ ನೆಲ್ಲಿಕುಂಜೆಯ ಅಬ್ದುಲ್ ಸಅದ್ ಮತ್ತು ಸಮೀರ್ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಸೆ 3 : ಅಕ್ರಮವಾಗಿ ಚಿನ್ನಾಭರಣ ಸಾಗಾಟ ನಡೆಸುತ್ತಿದ್ದ ಆರೋಪಿಗಳನ್ನು ಚಿನ್ನಾಭರಣ ಸಹಿತ ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನೆಲ್ಲಿಕುಂಜೆಯ ಅಬ್ದುಲ್ ಸಅದ್(30) ಮತ್ತು ಸಮೀರ್(30) ಎಂದು ಗುರುತಿಸಲಾಗಿದೆ. ಕಾಸರಗೋಡು ಹೊಸ ಬಸ್ಸು ನಿಲ್ದಾಣ ಪರಿಸರದಿಂದ ಇವರನ್ನು ಬಂಧಿಸಲಾಗಿದ್ದು, ಸುಮಾರು 1.2ಕಿಲೋ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣ ಮೂಲಕ ಅಕ್ರಮವಾಗಿ ಆರೋಪಿಗಳು ಕಾಸರಗೋಡಿಗೆ ಚಿನ್ನಾಭರಣ ಸಾಗಾಟ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದುಬೈಯಿಂದ ಬಂದ ಅಬ್ದುಲ್ ಸಅದ್, ಚಿನ್ನಾಭರಣವನ್ನು ಏಜೆಂಟ್ ಸಮೀರ್ ಗೆ ಹಸ್ತಾಂತರಿಸುತ್ತಿದ್ದಾಗ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಮಾರ್ಚ್ 27 ರಂದು ಉದ್ಯೋಗ ಅರಸಿಕೊಂಡು ದುಬೈಗೆ ತೆರಳಿದ್ದ ಅಬ್ದುಲ್ ಸಅದ್ ಉದ್ಯೋಗ ಲಭಿಸದ ಹಿನ್ನಲೆಯಲ್ಲಿ ಊರಿಗೆ ಮರಳಿದ್ದು, ಈ ಸಂದರ್ಭದಲ್ಲಿ ಅಕ್ರಮ ಚಿನ್ನಾಭರಣ ಸಾಗಾಟಗಾರರ ಕೆರಿಯರ್ ಆಗಿ ಕೆಲಸ ಮಾಡಿದ್ದು, ಕಮಿಷನ್ ಹಣದಾಸೆಗೆ ಈತ ಚಿನ್ನಾಭರಣ ಸಾಗಾಟ ಮಾಡಿದ್ದ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತ ಅಲ್ಲಿಂದ ಕಾಸರಗೋಡಿಗೆ ಬಂದು ಚಿನ್ನಾಭರಣ ಹಸ್ತಾಂತರಿಸುತ್ತಿದ್ದಾಗ ಪೊಲೀಸರಿಗೆ ತಗಲಾಕೊಂಡಿದ್ದಾನೆ. ಸ್ಪೀಕರ್ ನೊಳಗೆ ಕೋಟಿಂಗ್ ಮಾಡಿಸಿ ಅದರೊಳಗೆ ಚಿನ್ನಾಭರಣ ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಜಾಹೀರಾತು