Thursday, January 23, 2025
ಸುದ್ದಿ

ಬಂಟ್ವಾಳ ಹಾಗೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಆರೋಪಿಗಳನ್ನ ಬಂಧಿಸಿ, ಮಾರಾಟಕ್ಕೆ ತಂದಿದ್ದ ಎಂ.ಡಿ.ಎಂ.ಎ ಹಾಗೂ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು – ಕಹಳೆನ್ಯೂಸ್

ಬಂಟ್ವಾಳ : ಬಂಟ್ವಾಳ ಹಾಗೂ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಮೂವರು ಗಾಂಜ ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಯು ಮಾರಾಟಕ್ಕೆ ತಂದಿದ್ದ ಎಂ.ಡಿ.ಎಂ.ಎ ಹಾಗೂ ಗಾಂಜವನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಸಜೀಪ ಮೂಡ ಗ್ರಾಮದ ಆಸೀಪ್ , ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಪದು ನಿವಾಸಿ ತೌಸೀರ್, ವಿಟ್ಲ ಪೋಲೀಸ್ ಠಾಣೆ ಗೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ಪಿ.ಎಸ್.ಅಬ್ದುಲ್ ಅಜೀಜ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಬಂಧಿತರ ಕೈಯಿಂದ ವಶಪಡಿಸಿಕೊಂಡ ಎಂ.ಡಿ.ಎಂ.ಎ ಹಾಗೂ ಗಾಂಜಾದ ಮೊತ್ತ 1.56800 ರೂ ಅಗಿದೆ.