Thursday, January 23, 2025
ಸುದ್ದಿ

ಪಂಚಾಯತ್ ವತಿಯಿಂದ ರಸ್ತೆ ನಿರ್ಮಿಸಲು ಸ್ವಂತ ಜಾಗ ಉಚಿತವಾಗಿ ನೀಡಿದ ಅಂಕದಡ್ಕ ರಘು ಪೂಜಾರಿ : ಶಾಸಕ ರಾಜೇಶ್ ನಾಯಕ್ ಅವರಿಂದ ಅಬಿನಂದನೆ -ಕಹಳೆ ನ್ಯೂಸ್

ಪಂಚಾಯತ್ ವತಿಯಿಂದ ರಸ್ತೆ ಮಾಡಲು ತನ್ನ ಸ್ವಂತ ಜಾಗವನ್ನು ಉಚಿತವಾಗಿ ನೀಡಿರುವ ಅಂಕದಡ್ಕ ನಿವಾಸಿ ಶ್ರೀಯುತ ರಘು ಪೂಜಾರಿಯವರನ್ನ, ಮಾನ್ಯ ಬಂಟ್ವಾಳ ಶಾಸಕ ರಾಜೇಶ್ ನಾಯಕ್‌ರವರು ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತಕೋಡಿ ಎಂಬಲ್ಲಿ ವಾಸವಾಗಿರುವ ಜನತೆಗೆ ಸಮರ್ಪಕವಾದ ರಸ್ತೆ ವ್ಯವಸ್ದೆ ಇರಲಿಲ್ಲ. ಹೀಗಾಗಿ ಇಲ್ಲಿನ ಜನತೆ ಗ್ರಾಮ ಪಂಚಾಯತ್‌ಗೆ ರಸ್ತೆ ನಿರ್ಮಿಸಿಕೊಡುವಂತೆ ಮನವಿಯನ್ನ ಮಾಡಿದ್ರು, ಇದೀಗ ಪಂಚಾಯತ್ ಅಧ್ಯಕ್ಷ ಹಾಗೂ ಸದಸ್ಯರುಗಳ ಮನವಿಗೆ ಬೆಲೆಕೊಟ್ಟು ಅಂಕದಡ್ಕ ನಿವಾಸಿ ಶ್ರೀಯುತ ರಘು ಪೂಜಾರಿಯವರು, ತನ್ನ ಸ್ವಂತ ಜಾಗವನ್ನು ಉಚಿತವಾಗಿ ನೀಡಿ ರಸ್ತೆ ಹಾದುಹೋಗುವ ಸ್ಥಳದಲ್ಲಿದ್ದ ಅಡಿಕೆ ಹಾಗೂ ತೆಂಗಿನ ಗಿಡಗಳನ್ನು ತೆರವು ಮಾಡಿ ಪಂಚಾಯತ್ ವತಿಯಿಂದ ರಸ್ತೆ ಮಾಡಲು ಅನುವು ಮಾಡಿಕೊಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಬಂಟ್ವಾಳದ ಮಾನ್ಯ ಬಂಟ್ವಾಳ ಶಾಸಕ ರಾಜೇಶ್ ನಾಯಕ್‌ರವರು ರಸ್ತೆಯ ಶಿಲಾನ್ಯಾಸಕ್ಕೆ ಆಗಮಿಸಿದ್ರು. ಇದೇ ವೇಳೆ ಶ್ರೀಯುತ ರಘು ಪೂಜಾರಿಯವರನ್ನ ಮಿತ್ತ ಕೋಡಿ ನಾಗರಿಕರ ಪರವಾಗಿ ಅಭಿನಂದಿಸಿ ಅವರ ಸೇವಾ ಮನೋಭಾವವನ್ನು ಮುಕ್ತ ಕಂಠದಿAದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನೇಶ್ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್, ಮಿತ್ತಕೋಡಿ ಹಾಗೂ ಪುಂಡಿಕಾಯಿ ವಾಪ್ತಿಯ ನಾಗರಿಕರು ಉಪಸ್ಥಿತರಿದ್ದರು.