Thursday, January 23, 2025
ಸುದ್ದಿ

ಮಾರ್ಚ್ 22ಮತ್ತು 23ರಂದು ಬಲ್ನಾಡು ಶ್ರೀ ಕ್ಷೇತ್ರ ವಿನಾಯಕನಗರ ಉಜ್ರುಪಾದೆಯ ಶ್ರೀ ಕೊರಗಜ್ಜ ಮತ್ತು ಮಂತ್ರಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ – ಕಹಳೆ ನ್ಯೂಸ್

ಪುತ್ತೂರು : ಮಾರ್ಚ್ 22 ಮತ್ತು 23ರಂದು ಬಲ್ನಾಡು ಶ್ರೀ ಕ್ಷೇತ್ರ ವಿನಾಯಕನಗರ ಉಜ್ರುಪಾದೆಯ ಶ್ರೀ ಕೊರಗಜ್ಜ ಮತ್ತು ಮಂತ್ರಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ 22ರ ಸಂಜೆ ದೇವತಾ ಪ್ರಾರ್ಥನೆ ಸ್ವಸ್ತಿ ಪುಣ್ಯಾಹವಾಚನ ಪ್ರಾಸಾದಶುದ್ಧಿ, ಸಪ್ತಶುದ್ಧಿ, ರಕ್ಷೋಘ್ನಹೋಮ ವಾಸ್ತುಹೋಮ, ವಾಸ್ತುಬಲಿ, ಪ್ರಾಕಾರಬಲಿ ಧಾನ್ಯಾಧಿವಾಸ ನಡೆದು, ಬಳಿಕ ರಾತ್ರಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ 23ರ ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಹೋಮ ಪ್ರತಿಷ್ಠಾ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ ಕಲಾಶಾಭಿಷೇಕ, ತಂಬಿಲ ನಡೆದು ಬಳಿಕ 10.08ರಿಂದ 11.35ರ ತನಕ ನಡೆಯುವ ವೃಷಭ ಲಗ್ನದ ಶುಭಮುಹೂರ್ತದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ರವಿಚಂದ್ರ ನೆಲ್ಲಿತ್ತಾಯ ಬಲ್ನಾಡು ಇವರ ನೇತೃತ್ವದಲ್ಲಿ ಶ್ರೀ ಕೊರಗಜ್ಜ ಮತ್ತು ಶ್ರೀ ಮಂತ್ರಗುಳಿಗ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ನಡೆಯಲಿರುವುದು.
ಮಧ್ಯಾಹ್ನ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ ಶ್ರೀ ದೈವಗಳ ಭಂಡಾರ ತೆಗೆದು, ರಾತ್ರಿ ಶ್ರೀ ಕಲ್ಲುರ್ಟಿ ದೈವ ಶ್ರಿ ಮಂತ್ರಗುಳಿಗ ಹಾಗೊ ಶ್ರೀ ಕೊರಗಜ್ಜ ದೈವಗಳ ನೇಮೋತ್ಸವ ನಡೆಯಲಿದೆ
ಈ ಪುಣ್ಯ ಕಾರ್ಯಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಕ್ಷೇತ್ರದ ಆಡಳಿತ ಮಂಡಳಿಯವರು ಈ ಮೂಲಕ ವಿನಂತಿಸಿಕೊಂಡಿದ್ದಾರೆ.