Thursday, January 23, 2025
ಸುದ್ದಿ

ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ನೇಣು ಬಿಗಿದು ಆತ್ಮಹತ್ಯೆ –ಕಹಳೆ ನ್ಯೂಸ್

ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಶಿವರಾಮ್ ಸಪಲ್ಯರವರು ಊರಮಾಲು ನಿವಾಸಿಯಾಗಿದ್ದು, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿಯು ಶಿವರಾಮ್ ಅವರಿಗೆ ಕರೆ ಮಾಡಿದ್ದು, ಈ ವೇಳೆ ಪತಿ ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ ಪತ್ನಿಯು ನೆರೆ ಮನೆಯವರಿಗೆ ಫೋನ್ ಮಾಡಿ ಮನೆಗೆ ತೆರಳುವಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಶಿವರಾಮ್‌ರವರು ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ವಿಷಯ ಬೆಳಕಿಗೆ ಬಂದಿದೆ.

ಇನ್ನೂ ನಗರಸಭಾ ಸದಸ್ಯ ಶಿವರಾಮ್ ಸಪಲ್ಯ ಕೆಲ ದಿನಗಳಿಂದ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಇವರ ಸಾವಿಗೆ ಇದೇ ಕಾರಣ ಎಂಬ ಮಾತುಗಳು ಕೇಳಿಬಂದಿದೆ. ಸತ್ಯಾಂಶ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ. ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.