ಮಂಡೆಕೋಲು : ಗ್ರಾಮ ಪಂಚಾಯತ್.ನ ತಳಮಹಡಿಯ ಹಾಲಿನೊಳಗೆ ಸುಮಾರು ಹತ್ತು ಅಡಿ ಉದ್ದದ ಕಾಳಿಂಗ ಸರ್ಪವೊಂದು ಏಕಾಏಕಿ ನುಗ್ಗಿ ಕೆಲವು ಕಾಲ ಗ್ರಾಮಪಂಚಾಯತ್ ಸಿಬ್ಬಂದಿಗಳಿಗೆ ಹಾಗೂ ಸ್ಥಳೀಯರಲ್ಲಿ ಕೆಲವು ಸಮಯ ಆತಂಕ ಮೂಡಿಸಿತು.
ಕೊನೆಗೆ ಹಾವು ಹಿಡಿಯುವ ತಜ್ನರಾದ ಶಾಮ್ ಭಟ್ ಹಾಗೂ ನಿವೃತ್ತ ಅರಣ್ಯಾಧಿಕಾರಿಗಳಾದ ಶಿವರಾಮ್ ಬಲ್ಯಾಯ ಇವರು ಹಾವನ್ನು ಸ್ಥಳೀಯರ ನೆರವಿಂದ ಹಿಡಿದು ಪಿಲಿಕುಳ ನಿಸರ್ಗ ಧಾಮಕ್ಕೆ ಒಪ್ಪಿಸಲಾಯಿತು.