ಬಂಗ್ರಕೂಳೂರು 16ನೇ ವಾರ್ಡಿನ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ. ಭರತ್ ಶೆಟ್ಟಿ ವೈ-ಕಹಳೆ ನ್ಯೂಸ್
ಮಂಗಳೂರಿನ ಬಂಗ್ರಕೂಳೂರು 16ನೇ ವಾರ್ಡಿನಲ್ಲಿ 1.35 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಇವರು 1.35 ಕೋಟಿ ರೂ.ವೆಚ್ಚದಲ್ಲಿ ಕೊಟ್ಟಾರಚೌಕಿ, ಮಾಲಾಡಿ ಪ್ರದೇಶದಲ್ಲಿ ಕೃತಕ ನೆರೆಪರಿಹಾರಕ್ಕೆ ಕಿರು ಸಂಕವನ್ನು ಪುನರ್ ನಿರ್ಮಿಸಲಾಗುವುದು. ಮಾಲಾಡಿ ಕೋರ್ಟ್ ರಸ್ತೆಯನ್ನು 2 ಕೋ.ರೂ ವೆಚ್ಚದಲ್ಲಿ ಅಪೂರ್ಣ ಭಾಗವನ್ನು ಪೂರ್ಣಗೊಳಿಸಲಾಗುವುದು. ಮಾಲಾಡಿ ಕೋರ್ಟ್, ಲೋಕೇಶ್ ಗ್ಯಾರೇಜ್ ಬಳಿ ಎರಡು ಕಿರು ಸಂಕ ಪುನರ್ ನಿರ್ಮಾಣ ಮಾಡಲಾಗುವುದು. ಜತೆಗೆ ಒಳರಸ್ತೆಗಳನ್ನು ಶಾಶ್ವತ ಕಾಂಕ್ರಿಟ್ ಮಾಡಲಾಗುವುದು ಎಂದರು.
ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ಉಮೇಶ್ ಮಲರಾಯಸಾನ, ಹರಿಪ್ರಸಾದ್ ಶೆಟ್ಟಿ, ಪ್ರಮುಖರಾದ ಸುರೇಶ್ ಭಂಡಾರಿ, ಸುಜೀರ್ ಭಂಡಾರಿ, ಕಾರ್ತಿಕೇಯನ್, ಭಾಸ್ಕರ್, ಶೆಟ್ಟಿಗಾರ್, ರವಿಕೃಷ್ಣ ಮಾಲಾಡಿ, ಸುರೇಶ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.