ಈತ ಪ್ರತಿನಿತ್ಯ ಬಳಸೋದು ಮಹಿಳೆಯರ ಉಡುಪನ್ನೇ..! ಸ್ಕರ್ಟ್ ಹೀಲ್ಸ್ ಧರಿಸ್ತಾನೇ..ಮಹಿಳೆಯರ ಬಟ್ಟೆ ಅಂದ್ರೆ ಬಲುಇಷ್ಟ.. : – ಕಹಳೆ ನ್ಯೂಸ್
ಪ್ಯಾಶನ್ ಲೋಕ ಅಂದ್ರೆ ಅಲ್ಲಿ ದಿನಕ್ಕೊಂದು ಹೊಸ ಹೊಸ ಸ್ಟೈಲ್ ಹೊಸ ಹೊಸ ಲುಕ್ ಬದಲಾಗ್ತಾನೇ ಇರುತ್ತೆ. ಸ್ಟೈಲೀಶ್ ಜಾಯಮಾನದಲ್ಲಿ ತರತರದ ಗೆಟಪ್‌ನಲ್ಲಿ ಅದೆಷ್ಟೋ ಜನ ವಿಂಚುತ್ತಾರೆ.. ಇನ್ನು ಕೆಲವರಂತು ‘ಅರೇ ಹಿಂಗೂ ಸ್ಟೈಲ್ ಮಾಡಬಹುದಾ.?’ ಅಂತ ಹುಬ್ಬೇರಿಸುವಂತೆ ಸಮಾಜದ ಮುಂದೆ ಕಾಣಿಸಿಕೊಳ್ತಾರೆ. ಸ್ಟೈಲ್ ಅನ್ನೋ ಬಲೆಗೆ ಹುಡುಗರು ಹುಡುಗಿರು ಎಲ್ಲರೂ ದಾಸರಾಗಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ತನ್ನ ವಿನೂತನ ಸ್ಟೈಲ್ ಮೂಲಕ ಎಲ್ಲರನ್ನು ದಂಗಾಗುವಂತೆ ಮಾಡಿದ್ದಾರೆ
ಈ ವ್ಯಕ್ತಿ ಮಹಿಳೆಯರ ಉಡುಪುಗಳನ್ನೆ ಪ್ರತಿನಿತ್ಯ ಧರಿಸೋದಂತೆ.. ಎಸ್ ಅಮೆರಿಕಾದ ಟೆಕ್ಸಾಸ್ ಮೂಲದ ಮಾರ್ಕ್ ಬ್ರಿಯಾನ್‌ಗೆ ಮಹಿಳೆಯ ಉಡುಪೆಂದರೆ ಎಲ್ಲಿಲ್ಲದ ಪ್ರೀತಿ. ಕೇವಲ ಫೋಟೋ ಫೋಸ್‌ಗಾಗಿ ಮಹಿಳೆಯರ ಬಟ್ಟೆಯನ್ನ ಧರಿಸೋದಲ್ಲ.. ಈ ವ್ಯಕ್ತಿ ಪ್ರತಿದಿನ ಮಹಿಳೆಯರ ಸ್ಕರ್ಟ್ ಹೀಲ್ಸ್ ಧರಿಸ್ತಾರೆ.. ಇನ್ನೊಂದು ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಆಫೀಸಿಗೆ ಹೋಗೋವಾಗ, ಮದುವೆ, ಪರ‍್ಟಿ ಹೀಗೆ ಎಲ್ಲೆ ಹೋದ್ರೂ ಇದೇ ಬಟ್ಟೆಗಳನ್ನ ಧರಿಸ್ತಾರಂತೆ.
63 ವರ್ಷದ ಮಾರ್ಕ್ ಸದ್ಯ ಜರ್ಮನಿಯಲ್ಲಿ ನೆಲೆಸಿದ್ದು, ರೊಬೊಟಿಕ್ಸ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಈ ವಯಸ್ಸಿನಲ್ಲೂ ಮಹಿಳೆಯರ ಬಟ್ಟೆ ಧರಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಹೆಚ್ಚೆಂದರೆ ಹೆಂಡತಿಯ ಬಟ್ಟೆಯನ್ನು ಮಾರ್ಕ್ ಧರಿಸುತ್ತಾರಂತೆ. ಆಕೆಯೊಂದಿಗೆ ಶಾಪಿಂಗ್, ಪಾರ್ಟಿಗೆ ತೆರಳುವಾಗಲೂ ಸ್ಕರ್ಟ್, ಹೀಲ್ಸ್ ಧರಿಸುತ್ತಾರೆ.
ಮಹಿಳೆಯರು ಪರುಷರ ಬಟ್ಟೆಯನ್ನು ತೊಡುತ್ತಾರೆ. ಆದ್ರೆ ಪುರುಷರು ಯಾಕೆ ಮಹಿಳೆಯ ಬಟ್ಟೆ ಧರಿಸಬಾರದು ಎಂಬುದು ಮಾರ್ಕ್ ಬ್ರಿಯಾನ್ ಪ್ರಶ್ನೆ. ಹಾಗಾಗಿ ತನ್ನೊಳಗಿನ ಪ್ರಶ್ನೆಗೆ ತಾನೇ ಉತ್ತರಿಸುವ ಮೂಲಕ ಮಹಿಳೆಯರ ಬಟ್ಟೆಯನ್ನು ಮಾರ್ಕ್ ಬ್ರಿಯಾನ್ ಧರಿಸುತ್ತಿದ್ದಾರೆ. 20 ವರ್ಷದಿಂದ ಪುರುಷರ ಡ್ರೆಸ್ ಹಾಕಿ ಬೇಸರಗೊಂಡಿದ್ದ ಬ್ರಿಯಾನ್ ಕೊಂಚ ಬದಲಾವಣೆ ಇರಲಿ ಎಂದು ಲೆಟೀಸ್ ಬಟ್ಟೆಗಳನ್ನ ಧರಿಸಲು ಶುರು ಮಾಡುತ್ತಾರೆ. 2015ರಲ್ಲಿ ಪ್ರಾರಂಭವಾಗಿ ಇಂದಿಗೂ ಕೂಡ ಸ್ಕರ್ಟ್ ಮತ್ತು ಹೀಲ್ಸ್ ಧರಿಸ್ತಾರೆ.
ಸದ್ಯ ಮಾರ್ಕ್ ಬ್ರಿಯಾನ್ ಮಹಿಳೆಯರ ಬಟ್ಟೆ ಧರಿಸುವ ಮೂಲಕ ಟ್ರೆಂಡಿAಗ್‌ನಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇವರ ಫೋಟೋಗಳು ಹರಿದಾಡುತ್ತಿದೆ.