ಬೆಂಗಳೂರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.) ಇವರ ವತಿಯಿಂದ ಮಾ. 22 ರಂದು ‘ಚೈತ್ರ ಚಿಗುರು ಬೇವು ಬೆಲ್ಲಗಳ ಸಂಭ್ರಮ’ – ಕಹಳೆ ನ್ಯೂಸ್
ಬೆಂಗಳೂರು : ಬೆಂಗಳೂರು ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.) ಇವರ ವತಿಯಿಂದ ಮಾ.22 ರಂದು ‘ಚೈತ್ರ ಚಿಗುರು ಬೇವು ಬೆಲ್ಲಗಳ ಸಂಭ್ರಮ’ ಕಾರ್ಯಕ್ರಮ ನಡೆಯಲಿದೆ.
ಸಮಾರಂಭವು ಬೆಂಗಳೂರಿನ ಗಾಯತ್ರಿ ದೇವಸ್ಥಾನದ ‘ತಪೋವನ ಸಾಂಸ್ಕøತಿಕ ವೇದಿಕೆ’ಯಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಸಮಾಗಮದೊಂದಿಗೆ ಯುಗಾದಿ ಆಚರಣೆ ಅದ್ಧೂರಿಯಾಗಿ ನಡೆಯಲಿದೆ.
ಸಂಭ್ರಮದ ಅಂಗವಾಗಿ ಪೂರ್ವಾಹ್ನ ಗಣಹೋಮ ನಡೆದು ಬಳಿಕ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಕøತ ತಜ್ಞರು ಹಾಗೂ ನಿವೃತ್ತ ಕುಲಪತಿಗಳಾದ ಡಾ. ಗೋಪಾಲ ಆಚಾರ್ಯರವರಿಂದ ಪಂಚಾಂಗ ಶ್ರವಣ ನಡೆಯಲಿದೆ. ತದನಂತರ ಧಾರವಾಡ ಸಾಹಿತ್ಯ ಪರಿಷತ್ತಿನ ಕನ್ನಡ ವಿಮರ್ಶಕರು ಹಾಗೂ ನಿವೃತ್ತ ಕುಲಪತಿಗಳಾದ ಡಾ. ಬಸವಲಿಂಗಪ್ಪ ಆರಾಧ್ಯ ಅವರ ಅಧ್ಯಕ್ಷತೆಯಲ್ಲಿ , ಕುಂದಾಪುರ ವಿ. ಡಾ. ಕಲ್ಪನಾ ಆಚಾರ್ಯ ಮತ್ತು ತಂಡದವರಿಂದ ‘ಚೈತ್ರ ಚಿಗುರು ಭಾವಸಂಗಮ‘ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಅಪ್ಪಟ ಕನ್ನಡದ ಸಾಹಿತಿ ಹಾಗೂ ಕಾಸರಗೋಡಿನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾದ್ಯಾಯರಾದ ಡಾ. ಪ್ರಸನ್ನ ಬೋಳೇಯವರಿಗೆ ಯುಗಾದಿ ಪುರಸ್ಕಾರದ ಗರಿ ‘ಜೀವಮಾನ ಪ್ರಶಸ್ತಿ” ಪ್ರಧಾನ ಮಾಡಲಿದ್ದಾರೆ,
ಇನ್ನೂ ಕಾರ್ಯಕ್ರಮದಲ್ಲಿ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ (ರಿ.) ಸಂಸ್ಥೆಯ ಎಲ್ಲಾ ಕಲಾವಿದರಿಂದ ಜನಪದ ಗಾಯನ, ನೃತ್ಯ, ಕೋಲಾಟ, ಹಾಗೂ ಸಂಗೀತ ನಡೆಯಲಿದ್ದು, ಬಳಿಕ ಶಿರಸಿಯ ಡಾ. ದಿವ್ಯರಾಘವನ್ ಮತ್ತು ತಂಡದವರಿಂದ ‘ಕನ್ನಡ ಜನಪದ ಗೀತೆ’ ಮೇಳೈಸಲಿದೆ.