Monday, January 27, 2025
ಸುದ್ದಿ

ಪುತ್ತೂರಿನ ಪ್ರಜ್ಞಾ ಆಶ್ರಮದ ದೇವರ ಮಕ್ಕಳೊಂದಿಗೆ ವಿನೂತವಾಗಿ ಗುಣರಂಜನ್ ಶೆಟ್ಟಿ ಹುಟ್ಟುಹಬ್ಬ ಆಚರಣೆ –ಕಹಳೆ ನ್ಯೂಸ್

ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರ ಹುಟ್ಟು ಹಬ್ಬವನ್ನು ವಿನೂತನವಾಗಿ ದೇವರ ಮಕ್ಕಳೊಂದಿಗೆ ಆಚರಿಸಲಾಯಿತು.
ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಪುತ್ತೂರಿನ ಬೀರಮಲೆಯಲ್ಲಿರುವ ಪ್ರಜ್ಞಾ ವಿಕಲ ಚೇತನ ಆಶ್ರಮದ ವಿಶೇಷ ಮಕ್ಕಳೊಂದಿಗೆ ಗುಣರಂಜನ್ ಶೆಟ್ಟಿಯವರ ಜನ್ಮ ದಿನವನ್ನು ಆಚರಿಸಿದ್ದು, ಬಳಿಕ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಿ ಸಂತಸ ಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿಯವರು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾಗಿ, ಶ್ರೀಮಹಾಲಿಂಗೇಶ್ವರ ಸೇವಾ ಟ್ರಸ್ಟ್ (ರಿ), ಬೆಂಗಳೂರು ಐಕೇರ್ ಬ್ರಿಗೇಡ್, ಐಕೇರ್ ಫೌಂಡೇಶನ್ ಹಾಗೂ ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ, ಹಾಗೂ ಪರಿಸರವಾದಿಗಳಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿ ತಿಂಗಳಾಡಿ ಜಿಲ್ಲಾಧ್ಯಕ್ಷರು ಜಯಕರ್ನಾಟಕ ಜನಪರ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರು ತಾಲೂಕು ಅಧ್ಯಕ್ಷರಾದ ದೀಪಕ್ ಅಮೀನ್, ಪ್ರಜ್ವತ್ ರೈ ಮಿತ್ರಂಪಾಡಿ, ರಜತ್ ಆಳ್ವ ಪುತ್ತೂರು, ತಿಲಕ್ ರಾಜ್ ಶೆಟ್ಟಿ, ಸುರೇಂದ್ರ ರೈ ಮುಂಡೂರು, ಗಣೇಶ್ ಕರೈ, ಸುನಿಲ್ ಯಾನೆ ಸೋಮು ಮುಂಡೂರು, ಜಗದೀಶ್ ಆಚಾರ್ ತಿಂಗಳಾಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು