Sunday, January 26, 2025
ಸುದ್ದಿ

ತಾಯಿಗೆ ಕಚ್ಚಿದ ನಾಗರ ಹಾವು..! : ತಾಯಿ ಜೀವ ಉಳಿಸಿದ ಹೆತ್ತ ಮಗಳು –ಕಹಳೆ ನ್ಯೂಸ್

ತಾಯಿಯೋರ್ವರಿಗೆ ನಾಗರ ಹಾವು ಕಚ್ಚಿದ್ದು, ಸಮಯ ಪ್ರಜ್ಞೆಯಿಂದ ಹೆತ್ತ ಮಗಳೇ ತಾಯಿಯನ್ನು ರಕ್ಷಿಸಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಡೆದಿದೆ.
ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯೆ ಮಮತಾ ರೈ ಎಂಬುವರು ತಮ್ಮ ಅಡಿಕೆ ತೋಟದಲ್ಲಿ ಕೆಲಸ ಮಾಡಿತ್ತಿದ್ದ ವೇಳೆ ಆಕಸ್ಮಿಕವಾಗಿ ನಾಗರ ಹಾವೊಂದು ಕಚ್ಚಿದೆ. ಇದನ್ನು ಗಮನಿಸಿದ ಮಗಳು ಶ್ರಮ್ಯ ಸಮಯ ಪ್ರಜ್ಞೆಯಿಂದ ತಾಯಿ ಕಾಲಿಗೆ ಕಚ್ಚಿದ ಹಾವಿನ ವಿಷವನ್ನು ಬಾಯಿಂದಲೇ ತೆಗೆದು ತಾಯಿಯ ಜೀವ ಉಳಿಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಮತಾ ರೈ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಇನ್ನೂ ಮಗಳ ಧೈರ್ಯವನ್ನು ಮೆಚ್ಚಿ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಮಮತಾ ಅವರ ಮನೆಗೆ ಶಾಸಕ ಸಂಜೀವ ಮಠಂದೂರು ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಹಾಗೂ ಮತ್ತಿತರು ಗಾಯಾಳು ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.

ಇದೀಗ ಶ್ರಮ್ಯ ರೈ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗ್ತಾ ಇದೆ.