Sunday, January 26, 2025
ಸುದ್ದಿ

ಬಂಟ್ವಾಳದಲ್ಲಿ ಮೂವರು ನಾಪತ್ತೆ : ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು – ಕಹಳೆ ನ್ಯೂಸ್

ಬಂಟ್ವಾಳ: ಬಂಟ್ವಾಳ ತಾಲೂಕಿನ ಎಲಿಯನಡುಗೋಡು ಗ್ರಾಮದ ನಡ್ಯೋಡಿ ಮನೆ ನಿವಾಸಿ ಬಾಬು(66) ಅವರು ಮನೆಯಿಂದ ತೆರಳಿದವರು ನಾಪತ್ತೆಯಾಗಿರುವುದಾಗಿ ಅವರ ಪುತ್ರ ಪ್ರಕಾಶ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆ ಗೆ ದೂರು ನೀಡಿದ್ದಾರೆ.
ಬಾಬು ಅವರು ಮದ್ಯ ವ್ಯಸನಿಯಾಗಿದ್ದು, ಸಾಧಾರಣ ಶರೀರ, ಕೋಲು ಮುಖದ, 5 ಅಡಿ ಎತ್ತರ, ಕಪ್ಪು ಮೈ ಬಣ್ಣ ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಬು(66)

ಇನ್ನು ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ನಿವಾಸಿ ಹರೀಶ್ ಪೂಜಾರಿ(32) ಅವರು ಕೆಲಸಕ್ಕೆಂದು ಮನೆಯಿಂದ ತೆರಳಿದವರು ನಾಪತ್ತೆಯಾಗಿರುವುದಾಗಿ ಅವರ ಪತ್ನಿ ಅಶ್ವಿನಿ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹರೀಶ್ ಪೂಜಾರಿ(32)

ಹರೀಶ್ ಅವರು ಬಂಟ್ವಾಳ ತಾಲೂಕಿನ ಕೊರಗಟ್ಟೆ ಎಂಬಲ್ಲಿ ಬಾಡಿಗೆ ಕಟ್ಟಡದಲ್ಲಿ ಚಿಕನ್ ಸೆಂಟರ್ ನಡೆಸುತ್ತಿದ್ದು, ಅಲ್ಲಿಗೂ ಹೋಗದೇ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ. ಹರೀಶ್ ಅವರ ಎಡ ಕಣ್ಣಿನ ಬಳಿ ಹಳೆಯ ಗಾಯದ ಗುರುತು ಇರುತ್ತದೆ. ಕೇಸರಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.

ಹಾಗೇ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಹೊಸಂಗಡಿ ಮನೆ ನಿವಾಸಿ ದಿ.ಕುಂಡ ಅವರ ಪುತ್ರಿ ಪ್ರಮೀಳಾ(27) ಅವರು ಕೆಲಸಕ್ಕೆಂದು ಮನೆಯಿಂದ ತೆರಳಿದವರು ನಾಪತ್ತೆಯಾಗಿರುವುದಾಗಿ ಅವರ ತಾಯಿ ಲಲಿತಾ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಮೀಳಾ ಕೂಲಿ ಕಾರ್ಮಿಕಳಾಗಿದ್ದು, 5.3 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದಾರೆ. ಕೇಸರಿ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು.

ಪ್ರಮೀಳಾ(27)

ಇವರು ಕಂಡು ಬಂದಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ (08256 286375) ಅಥವಾ ದ.ಕ.ಜಿಲ್ಲಾ ಕಂಟ್ರೋಲ್ ರೂಂ(0824 2220500) ನ್ನು ಸಂಪರ್ಕಿಸಲು ವಿನಂತಿಸಲಾಗಿದೆ.