Saturday, January 25, 2025
ಸುದ್ದಿ

2 ಮಡದಿಯರು 9 ಮಕ್ಕಳೊಂದಿಗೆ ಕೂಲಾಗಿ ಲೈಫ್ ಲೀಡ್ ಮಾಡ್ತಾ ಇದ್ದಾನೇ ಈ ಭೂಪ..! – ಕಹಳೆ ನ್ಯೂಸ್

ಥಾಯ್ಲೆಂಡ್ : ವ್ಯಕ್ತಿಯೊಬ್ಬ ತನ್ನ ಇಬ್ಬರು ಮಡದಿಯರೊಂದಿಗೆ 9 ಮಕ್ಕಳನ್ನು, ಮೈಂಟೇನ್ ಮಾಡುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಏಕಕಾಲದಲ್ಲಿ ಹೀಗೆ ಇಬ್ಬರು ಹೆಂಡತಿಯರನ್ನು ನಿರ್ವಹಿಸುವುದು ಈತನಿಗೆ ಯಾವುದೇ ಸಮಸ್ಯೆ ಎಂಬಂತೆ ಕಾಣುತ್ತಿಲ್ಲ. ಅಲ್ಲದೇ ಈತನಿಗೆ ಇಬ್ಬರು ಹೆಂಡತಿಯರಿಂದ ಒಂಬತ್ತು ಮಕ್ಕಳೂ ಆಗಿವೆ.

ಮಾನೋಪ್ ನುಟ್ಟಯೋಥಿನ್ ಹೆಸರಿನ 46 ವರ್ಷದ ಈ ವ್ಯಕ್ತಿಗೆ 36 ವರ್ಷದ ವಾರಿಸ್ಸಾರಾ ಪೊಕ್ಸ್ರಿಚಾನ್ ಹಾಗೂ 30 ವರ್ಷದ ನಟ್ಟಯಾ ಟೊಂಗ್ಪಾನ್ ಹೆಸರಿನ ಇಬ್ಬರು ಮಡದಿಯರಿದ್ದಾರೆ. 2018ರ ವ್ಯಾಲೆಂಟೈನ್ಸ್ ದಿನದಂದು ತನ್ನಿಬ್ಬರೂ ಮಡದಿಯರೊಂದಿಗೆ ಸಂತಸದಿಂದ ಫೋಟೋ ತೆಗೆದುಕೊಂಡಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ದಿನದಿಂದ ಈತ ಹೀಗೆ ವೈರಲ್ ಆಗಿದ್ದಾನೆ.

ತನಗೆ ಮೊದಲು ಮೂವರು ಮಡದಿಯರಿದ್ದರು ಎನ್ನುವ ಮಾನೋಪ್, ಇದೀಗ ತನ್ನ ಮೊದಲ ಮಡದಿ ಮೃತಪಟ್ಟಿದ್ದು, ಆಕೆಯೊಂದಿಗೆ ತನಗೆ ಮೂವರು ಮಕ್ಕಳಿದ್ದಾರೆ ಎನ್ನುತ್ತಾನೆ. ದಶಕದ ಮಟ್ಟಿಗೆ ತನ್ನ ಎರಡನೇ ಪತ್ನಿ ವಾರಿಸ್ಸಾರಾ ಜೊತೆಗೆ ಸಂಸಾರ ಮಾಡುತ್ತಿದ್ದಿದ್ದಾಗಿ ತಿಳಿಸಿದ ಮಾನೋಪ್, ಕೆಲ ದಿನಗಳ ಬಳಿಕ ನಟ್ಟಾಯಾಳನ್ನೂ ಜೊತೆಗೆ ಕರೆತರುವ ನಿರ್ಧಾರ ಮಾಡಿದನಂತೆ..! ಪ್ರತಿ ಮಡದಿಯಿಂದಲೂ ತಲಾ ಮೂರರಂತೆ ಮಕ್ಕಳನ್ನು ಪಡೆದಿರುವ ಈತ ಈ ಒಟ್ಟು ಒಂಬತ್ತು ಮಕ್ಕಳ ತಂದೆಯಾಗಿದ್ದಾನೆ.

ಕಾರಿನ ಬಿಡಿಭಾಗಗಳ ಮಾರಾಟದ ವೃತ್ತಿಯಲ್ಲಿರುವ ಮಾನೋಪ್‌ಗೆ ಆತನ ಕೆಲಸದಲ್ಲಿ ಇಬ್ಬರೂ ಮಡದಿಯರು ಸಹಾಯ ಮಾಡುತ್ತಾರೆ. ತಮ್ಮ ಪತಿ ತಮ್ಮಿಬ್ಬರನ್ನೂ ನ್ಯಾಯಸಮ್ಮತ್ತವಾಗಿ ನೋಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ ಇಬ್ಬರೂ ಮಡದಿಯರು.