Sunday, January 19, 2025
ಸುದ್ದಿ

ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಮಾತನಾಡಲಿದ್ದಾರೆ ಮೋಹನ್ ಭಾಗ್ವತ್ – ಕಹಳೆ ನ್ಯೂಸ್

ನವದೆಹಲಿ: ಇದೇ ವಾರ ಚಿಕಾಗೋದಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅತ್ಯಂತ ಪ್ರಮುಖವಾದ ಭಾಷಣ ಮಾಡಲಿದ್ದಾರೆ.

ಸುಮಾರು 80 ದೇಶಗಳಿಂದ 25000 ಪ್ರತಿನಿಧಿಗಳು ಪಾಲ್ಗೊಳ್ಳುವ ಈ ವಿಶ್ವ ಹಿಂದೂ ಕಾಂಗ್ರೆಸ್ ಸಮಾವೇಶ ಚಿಕಾಗೋದಲ್ಲಿ ಸೆಪ್ಟಂಬರ್ 7 ರಿಂದ 9ರವರೆಗೂ ನಡೆಯಲಿದೆ. ಈ ಕಾಂಗ್ರೆಸ್‌ನಲ್ಲಿ ಮಾತನಾಡಲಿರುವ ಭಾಗ್ವತ್, ವಿಶ್ವದಾದ್ಯಂತ ಎಲ್ಲೆಡೆ ನೆಲೆಸಿರುವ ಹಿಂದೂಗಳಿಗೆ ಮಹತ್ವದ ಸಂದೇಶ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದಾದ್ಯಂತೆ ಎಲ್ಲೆಡೆ ನೆಲೆಸಿರುವ ಹಿಂದೂಗಳ ಕಷ್ಟ ಸುಖಗಳಿಗೆ ಸ್ಪಂದಿಸುವ ಹಾಗೂ ಎಲ್ಲೆ ಇದ್ದರೂ ಹಿಂದೂಗಳ ಒಂದೇ ಇಂದು ಸಾರುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದ್ದು, 25000 ಮಂದಿ ಇದರಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು 250 ಮಂದಿ ಪ್ರಮುಖರು ಮಾತನಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾವೇಶದಲ್ಲಿ ಪ್ರಮುಖವಾಗಿ ಆರ್ಥಿಕತೆ, ಶಿಕ್ಷಣ, ಮಾಧ್ಯಮ, ಸಂಘಟನೆ, ರಾಜಕೀಯ, ಮಹಿಳಾ ಸಮಸ್ಯೆ ಹಾಗೂ ಯುವಜನತೆ ಕುರಿತಾಗಿನ ವಿಚಾರಗಳು ಚರ್ಚೆಯಾಗಲಿವೆ.

ಈ ಸಮಾವೇಶದಲ್ಲಿ ಮೋಹನ್ ಭಾಗ್ವತ್ ಜೊತೆಯಲ್ಲಿ ದತ್ತಾತ್ರೇಯ ಹೊಸಬಾಳೆ, ಎಂಐಟಿ ಪ್ರೊಫೆಸರ್ ಎಸ್.ಪಿ. ಕೊಠಾರಿ, ಮೋಹನ್ ದಾಸ್ ಪೈ, ಅನುಪಮ್ ಖೇರ್, ರಾಜು ರೆಡ್ಡಿ, ಸ್ವಾಮಿ ಪರಮಾತ್ಮಾನಂದ ಸರಸ್ವತಿ, ಚಂದ್ರಿಕಾ ಟಂಡನ್, ಪ್ರೊ.ಸುಭಾಷ್ ಕಕ್ ಹಾಗೂ ಹೂಡಿಕೆದಾರ ರಾಜು ರೆಡ್ಡಿ ಪಾಲ್ಗೊಳ್ಳಲಿದ್ದಾರೆ.