Sunday, November 24, 2024
ಸುದ್ದಿ

ಜಗತ್ತು ಸುತ್ತಾಡಿದ್ರೂ ಮಂಗಳೂರಿನಂತಹ ಸ್ವಚ್ಛ , ಸುಂದರ ನಗರ ಬೇರೊಂದಿಲ್ಲ ;*ನಳಿನ್ ಕುಮಾರ್ ಕಟೀಲ್ *

ಜಗತ್ತು ಸುತ್ತಾಡಿದ್ರೂ ಮಂಗಳೂರಿನಂತಹ ಸ್ವಚ್ಛ ಹಾಗೂ ಸುಂದರ ನಗರ ಬೇರೊಂದಿಲ್ಲ. ಇದಕ್ಕೆಲ್ಲ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಆಡಳಿತ ಪುರಾತನ ಕಾವೂರು ಕೆರೆಯನ್ನು ಬಹಳ ಸುಂದರವಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಮೂಲಕ ಪರಿಸರದ ಜನತೆಗೆ ಒಳ್ಳೆಯ ವಿಹಾರ ತಾಣವನ್ನು ಕೊಡುಗೆಯಾಗಿ ನೀಡಿರುವ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹಾಗೂ ಸಮಿತಿಯವರನ್ನು ನಾವೆಲ್ಲರೂ ಅಭಿನಂದಿಸಬೇಕಾಗಿದೆ. ಕೆರೆ, ವಾಕಿಂಗ್ ಟ್ರ್ಯಾಕ್, ನೀರು ಶೇಖರಣೆ ವ್ಯವಸ್ಥೆ, ದೇವರ ವಿಸರ್ಜನಾ ಕುಂಡ, ಗಾರ್ಡನ್, ದೇವಸ್ಥಾನದ ಪುರಾತನ ಬಾವಿ ಪುನರ್ ನಿರ್ಮಾಣ ಮಾಡಲಾಗಿದೆ ಎಂದು ಮಾನ್ಯ ಸಂಸದರೂ, ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಶ್ಲಾಘಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಸ್ಮಾರ್ಟ್ ಸಿಟಿ ಯೋಜನೆಯ ವತಿಯಿಂದ 8 ಕೋಟಿ ರೂ ಅನುದಾನದಲ್ಲಿ ಅಭಿವೃದ್ಧಿಗೊಂಡಿರುವ ಕಾವೂರು ಕೆರೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಂಗಳೂರು ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಅವರ ಅಭಿವೃದ್ಧಿ ವಿಚಾರಧಾರೆ ಹಾಗೂ ಛಲದ ಕೆಲಸದಿಂದ ಸಾವಿರಾರು ಕೋಟಿ ರೂ.ಅನುದಾನ ತಂದು ಉತ್ತಮ ಕೆಲಸ ಮಾಡುತ್ತಿರುವ ಬಗ್ಗೆ ಶ್ಲಾಘಿಸಿದಲ್ಲದೆ ಕಾವೂರು ಕೆರೆ ಪುನರ್ ನಿರ್ಮಾಣ ಮಾಡುವ ಮೂಲಕ ದಾರ್ಮಿಕವಾಗಿ ಕೆರೆ ಉಳಿಸುವ ಹಾಗೂ ಪ್ರಕೃತಿ ಸಮರಕ್ಷಣೆಯ ಕೆಲಸವೂ ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಡಾ. ಭರತ್ ಶೆಟ್ಟಿ ವೈಯವರು ಮಾತನಾಡಿ, ಸಂಸದರ ನೆರವಿನಿಂದ ಸ್ಮಾರ್ಟ್ ಸಿಟಿ ಅನುದಾನ ತಂದು ಕಾವೂರು ಕೆರೆ ಅಭಿವೃದ್ಧಿ, ಪ್ರವಾಸೋದ್ಯಮ ಅಂಗವಾಗಿ ನಾಯರ್ ಕುದ್ರು ಅಭಿವೃದ್ಧಿ ಸಹಿತ ಹೆಚ್ಚಿನ ಕಾಮಗಾರಿಗಳು ನಡೆಯುತ್ತಿದೆ. ಉತ್ತರ ಕ್ಷೇತ್ರದ ಬೆಳವಣಿಗೆಗೆ ಸಂಸದರ ಸಹಕಾರ, ಅನುದಾನ ತರುವಲ್ಲಿ ನಿರಂತರವಾಗಿ ಜತೆಗಿದ್ದು ಪ್ರೋತ್ಸಾಹಿಸಿದ್ದಾರೆ ಎಂದರು. ಅಭಿವೃದ್ಧಿಯ ವಿಚಾರ ಬಂದಾಗ ಯಾವುದೇ ರಾಜಿಯಿಲ್ಲ. ಕಾವೂರು ಕೆರೆಯ ಅಭಿವೃದ್ಧಿಯಿಂದ ನೈಸರ್ಗಿಕವಾಗಿ ಸಮತೋಲನ ಕಾಪಾಡುವ ಕೆಲಸ ಆಗಿದೆ. ಸರಕಾರದಿಂದ ಕ್ಷೇತ್ರಕ್ಕೆ ಬಂದ 2 ಸಾವಿರ ಕೋಟಿ ಅನುದಾನವನ್ನು ಮೂಲಸೌಕರ್ಯ ಸೇರಿದಂತೆ ಸಮಗ್ರ ಏಳಿಗೆಗೆ ಪ್ರಾಮಾಣಿಕ ಯತ್ನ ನಡೆಸಲಾಗಿದೆ ಎಂದರು.

ಮಂಗಳೂರು ಮೇಯರ್ ಜಯಾನಂದ ಅಂಚನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್, ಕಾವೂರು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಕಾವೂರು ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೀಪಕ್ ಪೂಜಾರಿ, ಸ್ಮಾರ್ಟ್ ಸಿಟಿ ನಿರ್ದೇಶಕ ಅರುಣ್ ಪ್ರಭಾ ಕಾರ್ಪೋರೇಟರ್ ಗಳಾದ ಲೋಕೇಶ್ ಬೊಳ್ಳಾಜೆ, ಶ್ವೇತಾ ಪೂಜಾರಿ, ರೂಪಶ್ರೀ ಪೂಜಾರಿ, ವರುಣ್ ಚೌಟ, ಶರತ್ ಕುಮಾರ್,ಲೋಹಿತ್ ಅಮೀನ್, ಕಿರಣ್‍ಕುಮಾರ್ ಕೋಡಿಕಲ್, ಕಿಶೋರ್ ಕೊಠಾರಿ, ಶಕೀಲಾ ಕಾವ,ಸುಮಂಗಳ, ಗಾಯತ್ರಿ ರಾವ್,ಶೋಭಾ ರಾಜೇಶ್, ನಯನಾ ಕೋಟ್ಯಾನ್, ಸಂಗೀತ ನಾಯಕ್, ದಿವಾಕರ್ ಪಾಂಡೇಶ್ವರ್, ಪ್ರೇಮಾನಂದ ಶೆಟ್ಟಿ, ರಂಜಿನಿ ಕೊಟ್ಯಾನ್, ಪ್ರಮುಖರಾದ ಪ್ರಶಾಂತ್ ಪೈ ಉಪಸ್ಥಿತರಿದ್ದರು.