Saturday, January 25, 2025
ಸುದ್ದಿ

ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ : ವಗ್ಗದಲ್ಲಿ ಕಾರ್ಯಕರ್ತರ ಸಭೆ – ಕಹಳೆ ನ್ಯೂಸ್

ಬಂಟ್ವಾಳದ ಕಾವಳಪಡೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸುಮಾರು 4.85ಕೋಟಿ ರೂ ಅನುದಾನದಲ್ಲಿ ನಡೆಸಲಾದ ಅಭಿವೃದ್ಧಿ ಕಾಮಗಾರಿಗಳನ್ನ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉದ್ಘಾಟಿಸಿದರು. ಬಳಿಕ ವಗ್ಗದಲ್ಲಿ ಕಾರ್ಯಕರ್ತರ ಸಭೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಬೆಯಲ್ಲಿ ಮಾತನಾಡಿದ ಶಾಸಕ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು, ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಮತದಾರರ, ಕಾರ್ಯಕರ್ತರ ಋಣ ನನ್ನ ಮೇಲಿದ್ದು, ಅವರು ನನ್ನ ಮೇಲೆ ಇರಿಸಿದ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಶಾಸಕನಾಗಿ ಕ್ಷೇತ್ರದ ಪ್ರತಿಯೊಂದು ವಿಚಾರಗಳಿಗೆ ಸ್ಪಂದಿಸಿ,ನನ್ನ ಶಕ್ತಿ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಹೇಳಿದರು.

ಕಾವಳಪಡೂರು ಗ್ರಾಮದಲ್ಲಿ ಜನರ ಬೇಡಿಕೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ, ಕಳೆದ ನಾಲ್ಕು ವರ್ಷ ಎಂಟು ತಿಂಗಳಿನಲ್ಲಿ ಕ್ಷೇತ್ರದ ಜನತೆ ನೀಡಿದ ಸರ್ವ ರೀತಿಯ ಸಹಕಾರ ಬಂಟ್ವಾಳದ ಬದಲಾವಣೆಗೆ ಕಾರಣವಾಯಿತು. ಭಾರತವನ್ನು ಜಗತ್ತಿನ ಎತ್ತರಕ್ಕೆ ಬೆಳೆಯುವ ಬದಲಾವಣೆಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಜಗತ್ತಿನ ಶ್ರೇಷ್ಠ ನಾಯಕ ಎಂಬುದೇ ನಮಗೆ ಹೆಮ್ಮೆ ಎಂದು ಅವರು ತಿಳಿಸಿದರು.

ಬಿಜೆಪಿ ಆಡಳಿಕ್ಕೆ ಬರುವ ಮೊದಲು ನೀಡಿದ ಎಲ್ಲಾ ಭರವಸೆಗಳನ್ನು ಅತ್ಯಂತ ನಿಷ್ಠೆಯಿಂದ ಮಾಡಿದೆ ಎಂದು ನಾವು ಅತ್ಯಂತ ಖುಷಿಯಿಂದ ಹೇಳಬಹುದು. ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಹಿತ ಅನೇಕ ಭರವಸೆಗಳನ್ನು ಈಡೇರಿಕೆಗೆ ಬಿಜೆಪಿ ಕಾರಣವಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ಯಾವ ಕಾರಣಕ್ಕಾಗಿ ಉದಯವಾಯಿತು, ಹಿರಿಯ ಕಂಡಿದ್ದ ಕನಸುಗಳೇನು ಎಂಬುದರ ಮಹತ್ವವನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಬಂಟ್ವಾಳ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾವಳಪಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಗ್ರಾ.ಪಂ.ಉಪಾಧ್ಯಕ್ಷೆ ವಸಂತಿ, ಸದಸ್ಯರಾದ ಉಮೇಶ್, ಭವಾನಿ,ಶಕ್ತಿ ಕೇಂದ್ರದ ಅದ್ಯಕ್ಷ ಸತೀಶ್ ಶೆಟ್ಟಿ ಮದ್ವಕಟ್ಟೆ, ಪ್ರಮುಖರಾದ ಶಿವಪ್ಪ ಗೌಡ ನಿನ್ನಿಕಲ್ಲು, ಚಂದಪ್ಪ ಪೂಜಾರಿ, ಆನಂದ ಮದ್ವ, ಚಂದಪ್ಪ ಮೂಲ್ಯ, ಹರೀಶ್ ಕಾಡಬೆಟ್ಟು,ಮಹಾಬಲ, ರಾಮಣ್ಣ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಮೋಹಾನಂದ ಪೂಜಾರಿ ಕಲ್ಕರೆಬೆಟ್ಟು ಗುತ್ತು, ಕೊರಗಪ್ಪ ಗೌಡ ಮಾಣಿಬೆಟ್ಟು ಗುತ್ತು,ಸೂರಪ್ಪ ಪೂಜಾರಿ ಮದ್ವ, ನಾರ್ಣಪ್ಪ ಪೂಜಾರಿ, ನಾರಾಯಣ ಗೌಡ, ಬಾಲಕೃಷ್ಣ ನಾಯ್ಕ್, ಮೋಂಟ ಗೌಡ,ತಿಲಜ್ ರಾಜ್, ಶ್ರೀಧರ್ ಪೂಜಾರಿ ,ರಮೇಶ್ ಮಧ್ವ, ಮತ್ತಿತರರು ಉಪಸ್ಥಿತರಿದ್ದರು.