Friday, January 24, 2025
ಸುದ್ದಿ

ಜಿ.ಕೆ. ಬ್ರದರ್ಸ್ ದೊಡ್ಡಡ್ಕ ಪ್ರಾಯೋಜಕತ್ವದಲ್ಲಿ ಸಾಜ ಶಾಲಾ ಮೈದಾನದಲ್ಲಿ ಮಾ.26ರಂದು “ದೊಡ್ಡಡ್ಕ ಪ್ರೀಮಿಯರ್ ಲೀಗ್ ಸೀಸನ್ 1 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ 2023” – ಕಹಳೆ ನ್ಯೂಸ್

ಪುತ್ತೂರು : ಜಿ.ಕೆ. ಬ್ರದರ್ಸ್ ದೊಡ್ಡಡ್ಕ ಪ್ರಸ್ತುತ ಪಡಿಸುವ ದೊಡ್ಡಡ್ಕ ಪ್ರೀಮಿಯರ್ ಲೀಗ್ ಸೀಸನ್ 1 ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟ 2023 ಸಾಜ ಶಾಲಾ ಮೈದಾನದಲ್ಲಿ ಮಾ.26ರಂದು ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರಿಕೆಟ್ ಪಂದ್ಯಾಟವು 11 ಆಟಗಾರರನ್ನು ಒಳಗೊಂಡ ಬಲಿಷ್ಠ 5 ತಂಡಗಳ ನಡುವೆ ನಡೆಯಲಿದ್ದು, ಪಂದ್ಯಾಟದಲ್ಲಿ ವಿಜೇತಶಾಲಿ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುತ್ತದೆ. ಪ್ರಥಮ ಸ್ಥಾನಕ್ಕೆ ಡಿಪಿಎಲ್ ಟ್ರೋಫಿ ಜೊತೆಗೆ 15023 ರೂ . ನಗದು ಬಹುಮಾನ, ದ್ವಿತೀಯ ಸ್ಥಾನಕ್ಕೆ ಡಿಪಿಎಲ್ ಟ್ರೋಫಿ, 8023ರೂ. ನಗದು ಬಹುಮಾನವನ್ನ ಆಯೋಜಕರು ಘೋಷಿಸಿದ್ದಾರೆ.

ಪಂದ್ಯಾಟದ ಹಿನ್ನಲೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಅವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನ ಸಹಕಾರಿ ಪದವಿ ಪೂರ್ವ ಕಾಲೇಜು ವೆಂಕಟನಗರ ಇದರ ಸ್ಥಾಪಕಾಧ್ಯಕ್ಷರಾದ ಬಾಲಕೃಷ್ಣ ರೈ ಮುಗೆರೋಡಿ ಅವರು ಉದ್ಘಾಟಿಸಲಿದ್ದಾರೆ

ಇನ್ನೂ ಸಮಾರಂಭದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ಹಿಂದೂ ಯುವವಾಹಿನಿ ಪ್ರಮುಖರಾದ ಚಿನ್ಮಯ್ ಈಶ್ವರಮಂಗಲ, ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಸಹಸಂಚಾಲಕರಾದ ಅಜಿತ್ ಹೊಸಮನೆ, ಪುತ್ತೂರು ಬ್ಲಾಕ್ ಕಾಂಗ್ರೇಸ್ ನ ಅಧ್ಯಕ್ಷರಾದ ವಿಶ್ವನಾಥ ರೈ, ಉದ್ಯಮಿ ಪೃಥ್ವಿರಾಜ್ ಗೆಣಸಿನ ಕುಮೇರು, ಜಿಟಿಎಂ ವುಡ್ ವಕ್ರ್ಸ್ ನ ಮಾಲಕರಾದ ಯೂಸುಫ್ ಗೌಸಿಯಾ, ಹರೀಶ್ ಪೂಜಾರಿ ಅಟ್ಲಾರು, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಅಂಬ್ರೋಸ್ ಡಿ.ಸೋಜ, ಸ.ಹಿ.ಪ್ರಾ. ಶಾಲೆ ಸಾಜದ ಪ್ರಧ್ಯಾಪಕರಾದ ಶಶಿಕಾಂತ್ ನಾಯಕ್ ಅಟ್ಲಾರು, ಮಹಾಲಿಂಗೇಶ್ವರ ಗ್ಯಾರೇಜ್ ಮತ್ತು ಸ್ಪ್ರೇ ಪೈಂಟ್ಸ್ ನ ಮಾಲಕರಾದ ಸಂಜೀವ ಪೂಜಾರಿ, ಬೆಳಿಯೂರು ಕಟ್ಟೆಯ ಪದವಿ ಪೂರ್ವ ಕಾಲೇಜಿನ ಪ್ರಧಾನ ಪ್ರಾಂಶುಪಾಲರಾದ ಹರಿಪ್ರಕಾಶ್ ಬೈಲಾಡಿ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.

ಪಂದ್ಯಾಕೂಟ ನಡೆದ ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸಂಜೀವ ಮಠಂದೂರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರಮಟ್ಟದ ಕರಾಟೆಪಟುಗಳಾದ ಕುಮಾರಿ ದೃಶನ ಸರಳಿಕಾನ ಹಾಗೂ ಮಾಸ್ಟರ್ ರಿಶಾನ್ ಸರಳಿಕಾನ ಇವರನ್ನ ಸನ್ಮಾನಿಸಿ ಗೌರವಿಸಲಾಗುವುದು.

ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶ್ರೇಣಿಯ ಅಂಕಗಳಿಸಿದ ಯಜ್ಞೇಶ್ ಭಂಡಾರಿ ಹಾಗೂ ಗೀತಾ ಕೆ ಎಂ ಇವರನ್ನ ಅತಿಥಿ ಗಣ್ಯರು ಸನ್ಮಾನಿಸಲಿದ್ದಾರೆ.

ಇನ್ನೂ ಸಮಾರೋಪದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ವಿಶ್ವ ಹಿಂದೂ ಪರಿಷದ್ ಬಜರಂಗದಳದ ಸಹ ಸಂಚಾಲಕರಾದ ಮುರಳೀಕೃಷ್ಣ ಹಸಂತಡ್ಕ, ಕಹಳೆ ನ್ಯೂಸ್ ನ ಪ್ರಧಾನ ಸಂಪಾದಕರಾದ ಶ್ಯಾಮ್ ಸುದರ್ಶನ್ ಹೊಸಮೂಲೆ, ಪುತ್ತೂರು ಜಿಲ್ಲಾ ವಿಶ್ವ ಹಿಂದು ಪರಿಷದ್ ನ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ, ವಿಶ್ವ ಹಿಂದು ಪರಿಷದ್ ಬಜರಂಗದಳದ ಪುತ್ತೂರು ನಗರ ಪ್ರಖಂಡದ ಅಧ್ಯಕ್ಷರಾದ ಜರ್ನಾದನ ಬೆಟ್ಟ , ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಕೃಷ್ಣ ಆಳ್ವ, ಕಲ್ಲಾರೆ ವುಡ್ ಫರ್ನಿಚರ್ & ಇಂಟೀರಿಯರ್ ನ ಮಾಲಕರಾದ ಗಣೇಶ್ ಭಟ್ ಸುದನಡ್ಕ, ಜ್ಯೋತಿಷ್ಯರಾದ ಸುಬ್ರಹ್ಮಣ್ಯ ಬಲ್ಯಾಯ, ಬಿಜೆಪಿ ಬೂತ್ ಅಧ್ಯಕ್ಷರಾದ ಜಗದೀಶ್ ಭಂಡಾರಿ, ಬಲ್ನಾಡು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷರಾದ ಅಕ್ಷಯ್ ರೈ ಸಾರ್ಯ, ಬಲ್ನಾಡು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ವಸಂತಿ ಹರೀಶ್ ಪೂಜಾರಿ, ಶ್ರೀಮತಿ ಶೋಭಾ ಮುರುಂಗಿ, ರವಿಚಂದ್ರ ಸಾಜ, ಪ್ರಗತಿಪರ ಕೃಷಿಕರಾದ ಚಿದಾನಂದ ಪೂಜಾರಿ ಗೆಣಸಿನಕುಮೇರು ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ.