Friday, January 24, 2025
ಸುದ್ದಿ

ಸರಕಾರದಿಂದ ಸುಬ್ರಹ್ಮಣ್ಯ ಗ್ರಾ.ಪಂಚಾಯತ್ ವ್ಯಾಪ್ತಿಯ 100 ಬಡಕುಟುಂಬಗಳಿಗೆ ಮನೆ ನಿರ್ಮಾಣ; ಶ್ರೀವತ್ಸ ಅವರಿಗೆ ಗ್ರಾಮಸ್ಥರಿಂದ ಶ್ಲಾಘನೆ –ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ನೂರು ಬಡಕುಟುಂಬಗಳಿಗೆ ಸರಕಾರದ ವತಿಯಿಂದ ಮನೆ ನಿರ್ಮಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಟ್ರಸ್ಟಿ ಶ್ರೀವತ್ಸ ಎಂಬವರ ಸತತ ಪ್ರಯತ್ನದಿಂದ ಬಡ ಕುಟುಂಬಗಳಿಗೆ ಅನುದಾನ ದೊರೆದಿದ್ದು, ಶ್ರೀವತ್ಸರವರು ಮೂಲತಃ ತೀರ್ಥಹಳ್ಳಿಯವರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ವ್ಯವಹಾರ ನಡೆಸುತ್ತಿದ್ದು, ಕಳೆದ ಬಾರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೊಸ ಸಮಿತಿಯಲ್ಲಿ ಟ್ರಸ್ಟಿಯಾಗಿ ಆಯ್ಕೆಯಾಗಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವತ್ತಿನಿಂದ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದಲ್ಲದೇ ಸುಬ್ರಹ್ಮಣ್ಯ ಗ್ರಾಮದ ಅಭಿವೃದ್ಧಿ ಕಾರ್ಯವನ್ನು ಮಾಡುವ ಮೂಲಕ ಕ್ಷೇತ್ರದ ಜನರ ವಿಶ್ವಾಸರ್ಹರರಾಗಿದ್ದಾರೆ. ಶ್ರೀವತ್ಸರವರು ಅವಧೂತ್ ವಿನಯ್ ಗುರೂಜಿಯವರ ಪರಮ ಭಕ್ತರಾಗಿದ್ದು, ಅವರ ಆಪ್ತ ಕಾರ್ಯದರ್ಶಿಯಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ಗ್ರಾಮದಲ್ಲಿ ಬಡ ಕುಟುಂಬಗಳು ಸ್ವಂತ ಮನೆ ನಿರ್ಮಾಣಕ್ಕಾಗಿ ಆರ್ಥಿಕ ಸಹಾಯ ಯಾಚಿಸಿದ್ರು. ಈ ಹಿನ್ನಲೆ ಶ್ರೀವತ್ಸರವರು ಅವಧೂತ್ ವಿನಯ್ ಗುರೂಜಿಯವರ ಮಹಾತ್ಮ ಗಾಂಧಿ ಸೇವಾ ಟ್ರಸ್ವಿ ವತಿಯಿಂದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಕರ್ನಾಟಕ ಸರಕಾರಕ್ಕೆ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಸಲ್ಲಿಸಿದ್ರು.

ಇದೀಗ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಸುಮಾರು 775 ಕುಟುಂಬಳಿಗೆ ಮನೆ ಕಟ್ಟಲು ಆರ್ಥಿಕ ಸಹಾಯ ನೀಡಲು ಸರಕಾರ ಮುಂದಾಗಿದ್ದು, ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಬಸವ ವಸತಿ ಯೋಜನೆಯಡಿ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆಯಡಿಯಲ್ಲಿ ಹೆಚ್ಚುವರಿ 100 ಮನೆಗಳನ್ನು 2022-23 ನೇ ಸಾಲಿನ ಮನೆಗಳ ಗುರಿಯಲ್ಲಿ ಮಂಜೂರು ಮಾಡುವಂತೆ ಆದೇಶಿಸಿದೆ.

ಶ್ರೀವತ್ಸರವರ ಸಮಾಜ ಸೇವೆ ಹಾಗೂ ಸತತ ಪ್ರಯತ್ನದಿಂದ ಬಡಕುಟುಂಬಗಳಿಗೆ ಮನೆ ಜೊತೆಗೆ ಅವರ ಸಂಕಷ್ಟ ದೂರಾವಗ್ತಾ ಇದೆ. ಬಡವರ ಮೊಗದ ನಗುವಿಗೆ ಕಾರಣಕರ್ತರಾದ ಇವರಿಗೆ ಗ್ರಾಮಸ್ಥರಿಂದ ಹಾಗೂ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ