Sunday, January 19, 2025
ಸುದ್ದಿ

Breaking News : ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಶ್ರೀರಾಮಚಂದ್ರಾಪುರಮಠವೇ ಮುಂದುವರಿಸಲಿ ; ಸುಪ್ರೀಂ ಕೋರ್ಟಿನಿಂದ ಮಹತ್ವ ಆದೇಶ – ಕಹಳೆ ನ್ಯೂಸ್

ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಸರ್ಕಾರಕ್ಕೆ ವಹಿಸುವ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ಕಳೆದ ಆಗಸ್ಟ್ 10 ರಂದು ತೀರ್ಪು ನೀಡಿತ್ತು ಹಾಗೂ ಅದೇ ದಿನ ಮಧ್ಯಂತರ ಆದೇಶವನ್ನು ನೀಡಿ ; ತೀರ್ಪಿನಲ್ಲಿ ಉಲ್ಲೇಖಿಸಿರುವ ಡಿಸಿ ನೇತೃತ್ವದ ಸಮಿತಿ ಸೆಪ್ಟೆಂಬರ್ 10 ನಂತರ ಕಾರ್ಯ ನಿರ್ವಹಿಸಲಿದೆ, ಸೆಪ್ಟೆಂಬರ್ 10 ವರೆಗೆ ಮಠವೇ ಆಡಳಿತವನ್ನು ಸಡೆಸಲಿದೆ ಎಂದು ಮಧ್ಯಂತರ ಆದೇಶದಲ್ಲಿ ಹೇಳಿತ್ತು.

ಇಂದು ಈ ಪ್ರಕರಣದ ಕುರಿತಾಗಿ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆದಿದ್ದು, ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ ಘನ ನ್ಯಾಯಾಲಯ ರಾಜ್ಯ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮುಂದುವರಿಸುವಂತೆ ಸೂಚಿಸಿದೆ.
ಅಂದರೆ ಸೆಪ್ಟೆಂಬರ್ 10 ರ ನಂತರ ಡಿಸಿ ನೇತೃತ್ವದ ಸಮಿತಿ ಅಧಿಕಾರ ವಹಿಸಿಕೊಳ್ಳುವುದಕ್ಕೆ ತಡೆಸಿಕ್ಕಿದ್ದು, ಸುಪ್ರೀಂ ಕೋರ್ಟಿನಲ್ಲಿ ತೀರ್ಮಾನ ಆಗುವವರೆಗೂ ದೇವಾಲಯದ ಆಡಳಿತವನ್ನು ಶ್ರೀಮಠವೇ ನಿರ್ವಹಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ

ಜಾಹೀರಾತು
ಜಾಹೀರಾತು
ಜಾಹೀರಾತು