Recent Posts

Monday, January 20, 2025
ಬೆಂಗಳೂರುಸಿನಿಮಾಸುದ್ದಿ

ಯುಗಾದಿ ಹಬ್ಬದಂದು ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ ರಾಗಿಣಿ – ಕಹಳೆ ನ್ಯೂಸ್

ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ರಾಗಿಣಿ ದ್ವಿವೇದಿ (Ragini Dwivedi) ಅವರ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಬ್ಯುಸಿ ನಟಿ ರಾಗಿಣಿ ಇದೀಗ ಯುಗಾದಿ ಹಬ್ಬಕ್ಕೆ ರೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ಸದಾ ಹಾಟ್ ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದ್ದ ಬ್ಯೂಟಿ ಈಗ ಸೀರೆಯುಟ್ಟು ದರ್ಶನ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

`ರಾ’ಗಿಣಿ ಕನ್ನಡ ಮಾತ್ರವಲ್ಲದೇ ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood) ಕೂಡ ನಟಿಸುತ್ತಿದ್ದಾರೆ. ಹೊಸ ಬಗೆಯ ಪಾತ್ರಗಳ ಮೂಲಕ ನಟಿ ಬರುತ್ತಿದ್ದಾರೆ. ಕೆಂಪೇಗೌಡ, ವೀರ ಮದಕರಿ, ಕಳ್ಳ ಮಳ್ಳ ಸುಳ್ಳ ಸಿನಿಮಾಗಳಿಂದ ಗಮನ ಸೆಳೆದಿದ್ದಾರೆ.

ಸದಾ ಮಾಡ್ರನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಗಿಣಿ ಈಗ ಮಹಾಲಕ್ಷ್ಮಿಯಂತೆ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ. ಕೆಂಪು ಕಲರ್ ಸೀರೆಗೆ ಸಿಲ್ವರ್ ಬಾರ್ಡರ್ ಹೈಲೈಟ್ ಆಗಿದೆ. ಗ್ರ್ಯಾಂಡ್ ಜ್ಯುವೆಲ್ಲರಿ ಧರಿಸಿ ಸಿಂಪಲ್ ಮೇಕಪ್‌ನಲ್ಲಿ ನಟಿ ಮಿಂಚಿದ್ದಾರೆ. ಇನ್ನೂ ರಾಗಿಣಿ ಲಿಸ್ಟ್ ಒಟ್ಟು ಏಳು ಸಿನಿಮಾಗಳಿವೆ. ಇನ್ನೊಂದಿಷ್ಟು ಚಿತ್ರಗಳು ಮಾತುಕತೆಯ ಹಂತದಲ್ಲಿದೆ. ಈ ವರ್ಷ ರಾಗಿಣಿ ಅಭಿಮಾನಿಗಳಿಗೆ ಸಿನಿಮಾಗಳ ಮೂಲಕ ಹಬ್ಬವೋ ಹಬ್ಬ.