Sunday, January 19, 2025
ಸುದ್ದಿ

ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 10 ಕೋಟಿ ರೂ. ನೆರವು – ಕಹಳೆ ನ್ಯೂಸ್

ಬೆಳ್ತಂಗಡಿ, ಸೆ08(SS): ಸಕಲೇಶಪುರ ಸೇರಿದಂತೆ ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ನಷ್ಟ ಅನುಭವಿಸಿರುವ ಸಂತ್ರಸ್ತರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಒಟ್ಟು 10 ಕೋ.ರೂ. ನೀಡುವುದಾಗಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಘೋಷಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಈ ಕುರಿತು ಸಭೆ ನಡೆದಿದ್ದು, ಕೊಡಗು ಜಿಲ್ಲೆಯಲ್ಲಿ ನಡೆದಿರುವ ಹಾನಿ, ನಷ್ಟದ ಬಗ್ಗೆ ನಡೆಸಿದ ಸಮೀಕ್ಷಾ ವರದಿಯನ್ನು ನಿರ್ದೇಶಕ ಯೋಗೀಶ್‌ ವೀರೇಂದ್ರ ಹೆಗ್ಗಡೆ ಅವರಿಗೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊಡಗು ಜಿಲ್ಲೆಯಲ್ಲಿ ಮನೆ ಕಳೆದುಕೊಂಡ 1,044 ಕುಟುಂಬಗಳಿಗೆ ಗೃಹ ನಿರ್ಮಾಣಕ್ಕೆ ತಲಾ 25 ಸಾವಿರ ರೂ.ಗಳಂತೆ 2.61 ಕೋ.ರೂ. ಮಂಜೂರು ಮಾಡಲಾಯಿತು. ನಿತ್ಯೋಪಯೋಗಿ ವಸ್ತು ಖರೀದಿಗೆ 1,335 ಮನೆಗಳಿಗೆ ತಲಾ 15 ಸಾವಿರ ರೂ.ನಂತೆ 2 ಕೋ.ರೂ. ಘೋಷಿಸಿದರು. 1,117 ಕುಟುಂಬಗಳ 1,450 ಎಕರೆ ಕೃಷಿ ನಾಶವಾಗಿದ್ದು, ಇವರಿಗೆ ಕೃಷಿ ಮರುನಿರ್ಮಾಣಕ್ಕೆ ತಲಾ 25 ಸಾವಿರ ರೂ.ಗಳಂತೆ 2.80 ಕೋ.ರೂ. ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಕಲೇಶಪುರ ಹಾಗೂ ಅರಕಲಗೂಡು ಪ್ರದೇಶಗಳಲ್ಲಿ ಹಾನಿಯಾದ ಕುಟುಂಬಗಳಿಗೆ ತಲಾ 10 ಸಾವಿರ ರೂ.ನಂತೆ 60 ಲಕ್ಷ ರೂ. ಘೋಷಿಸಿದ್ದಾರೆ. ಧರ್ಮಾಧಿಕಾರಿಯವರು ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಕಾರ್ಯಕರ್ತರಿಗೆ ಒಟ್ಟು 8 ಕೋ.ರೂ.ಗಳನ್ನು ಸಂತ್ರಸ್ತರಿಗೆ ನೇರವಾಗಿ ತಲುಪಿಸುವಂತೆ ಸೂಚಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 6,750 ಖಾಯಂ ಸಿಬಂದಿ ತಮ್ಮ 3 ದಿನದ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದು, ಅಷ್ಟೇ ಮೊತ್ತವನ್ನು ಯೋಜನೆಯಿಂದ ಸೇರಿಸಿ ಒಟ್ಟು 2 ಕೋ.ರೂ.ಗಳನ್ನು ಮುಖ್ಯಮಂತ್ರಿ ಕೊಡಗು ಪರಿಹಾರ ನಿಧಿಗೆ ಸಮರ್ಪಿಸಲು ತೀರ್ಮಾನಿಸಲಾಯಿತು. ಈ ಕುರಿತು ಯೋಜನೆಯ ಕಾರ್ಯಕರ್ತರ ನಿಯೋಗ ಬೆಂಗಳೂರಿಗೆ ತೆರಳಿ ಕೊಡಗು ಜಿಲ್ಲೆಯ ಹಾನಿಯ ವರದಿಯನ್ನು ನೀಡಿ 2 ಕೋ.ರೂ.ಗಳ ಚೆಕ್‌ ಹಸ್ತಾಂತರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದುವರೆಗೆ ಕೊಡಗು ಜಿಲ್ಲೆಯಲ್ಲಿ ಸುಮಾರು 1,715 ಗ್ರಾಮಾಭಿವೃದ್ಧಿ ಯೋಜನೆಯ ಕುಟುಂಬಗಳಿಗೆ ಹಾನಿಯಾಗಿದೆ. ಇದರಲ್ಲಿ 1 ಸಾವಿರ ಕುಟುಂಬಗಳ ಮನೆ ಬಹುತೇಕ ಹಾನಿಯಾಗಿದೆ. 2.50 ಕೋ.ರೂ.ಗಳ ಸೊತ್ತುಗಳು, 1 ಕೋ.ರೂ.ಗಳಿಗೂ ಮಿಕ್ಕಿದ ವ್ಯವಹಾರದ ವಸ್ತುಗಳು ನಾಶವಾಗಿದೆ. ಮಾತ್ರವಲ್ಲ 1,500 ಎಕರೆ ಕೃಷಿ ನಾಶವಾಗಿದ್ದು, ಅವರಿಗೆ ನೀಡಬೇಕಾದ ಸಹಕಾರದ ಕುರಿತು ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆದಿದೆ.