ಕೆಯ್ಯೂರು : ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ 7ಗಂಟೆಯಿಂದಮಹಾಗಣಪತಿ ಹೋಮ, ಚಂಡಿಕಾಯಾಗ ಹಾಗೂ ಉಗ್ರಾಣ ತುಂಬಿಸುವುದು ನಡೆದಿದೆ.
ದೇವಾಲಯಕ್ಕೆ ಹಲವು ಕಡೆಗಳಿಂದ ಮೆರವಣಿಗೆ ಮೂಲಕ ಹೊರಕಾಣಿಕೆ ಸಂಗ್ರಹಿಸಿ, ದೇವಿನಗರದ ಮುಖ್ಯದ್ವಾರದಿಂದ ಚೆಂಡೆ, ಕುಣಿತ ಭಜನೆ ಸಂಕರ‍್ತನೆಯೊಂದಿಗೆ ‘ಹೊರ ಕಾಣಿಕೆ’ ಶ್ರೀ ಕ್ಷೇತ್ರಕ್ಕೆ ತಲುಪಿದೆ.
ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್, ಆನಂದ ಭಟ್ ಅವರು ದೇವಿಗೆ ಪ್ರಾರ್ಥನೆ ಸಲ್ಲಿಸಿ, ಪೂಜೆ ನೆರವೇರಿಸಿದ್ರು.
ಬಳಿಕ ಚಂಡಿಕಾಯಾಗದ ಪೂರ್ಣಹುತಿ, ಶ್ರೀ ದೇವಿಗೆ ಸಾನಿಧ್ಯ ಕಲಶಾಭೀಷೆಕ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆದಿದೆ.
ಇನ್ನೂ ಈ ಮೆರವಣಿಗೆಯಲ್ಲಿ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶಶಿಧರ ರಾವ್ ಬೊಳಿಕಲ, ಸದಸ್ಯರು, ಶ್ರೀ ದುರ್ಗಾ ಭಜನಾ ಮಂಡಳಿ ಶ್ರೀ ಕ್ಷೇತ್ರ ಕೆಯ್ಯೂರು, ಹಾಗೂ ಊರಿನಹತ್ತು ಸಮಸ್ತರು ಪಾಲ್ಗೊಂಡಿದ್ರು.