Recent Posts

Sunday, January 19, 2025
ಸುದ್ದಿ

ಹಳ್ಳಿಗಳ ನಿನಾದ ಅಡಗದಿರಲಿ ; ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕ ನಿತ್ಯಾನಂದ ಶೆಟ್ಟಿ ಕರೆ – ಕಹಳೆ ನ್ಯೂಸ್

ಮೂಡಬಿದಿರೆಃ ಹಕ್ಕಿಗಳ ಚಿಲಿಪಿಲಿ ನಿನಾದ ಅಡಗದಿರಲಿ.ಮಳೆಗಾಲದಲ್ಲಿ ಅವಶ್ಯ ಹಣ್ಣು,ಹೂವಿನ ಗಿಡಗಳನ್ನು ನೆಟ್ಟು,ಬೇಸಗೆಯಲ್ಲೂ ಪೋಷಿಸುವಂತೆ ಮಕ್ಕಳ ಕಾಳಜಿ ವಹಿಸಬೇಕು.

ಪಕ್ಷಿಗಳಿಗೆ ಉಪಟಳವೆಸಗದೆ, ಪ್ರೀತಿಯಿಂದ ಸಲಹುವ ಕಾರ್ಯ ಆಗುವಂತಾಗಲಿ ಎಂದು ಗುಬ್ಬಚ್ಚಿಗೂಡು ಅಭಿಯಾನದ ಸಂಚಾಲಕ ನಿತ್ಯಾನಂದ ಶೆಟ್ಟಿ ಕರೆನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದಿರೆಯ ಜ್ಯೋತಿನಗರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಾಗಾರ ನಡೆಯಿತು. ಅತಿಥಿಗಳಾಗಿ ಪತ್ರಕರ್ತ ಹರೀಶ್ ಕೆ.ಆದೂರು ಭಾಗವಹಿಸಿ ಪಕ್ಷಿಸಂಕುಲವನ್ನು ಉಳಿಸುವ ಮಹತ್ಕಾರ್ಯ ಆಗುವ ಅವಶ್ಯಕತೆಯಿದೆ ಎಂದರು. ಸಂಘಟನೆಯ ರಮ್ಯಾ ಪಕ್ಷಿಸಂಕುಲದ ಪರಿಚಯ ಮಾಡಿದರು. ಕಾರ್ಯಾಗಾರದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರು,ವಿದ್ಯಾರ್ಥಿಗಳು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ರಾಜೇಶ್ ಮಂದಾರ,ಮೂಡಬಿದ್ರೆ
           Mob : 8088188339