ಬೈಕಂಪಾಡಿ: ಬೈಕಂಪಾಡಿ ಮೀನಕಳಿಯ, ತಣ್ಣೀರುಬಾವಿ ಗ್ರಾಮದಲ್ಲಿನ 238 ಬಡ ಕುಟುಂಬಗಳಿಗೆ ಹಕ್ಕುಪತ್ರವನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಶುಕ್ರವಾರ ವಿತರಣೆ ಮಾಡಿದರು.
ಈ ಸಂದರ್ಭ ಮಾತನಾಡಿದ ಅವರು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ನಾನು ಶಾಸಕನಾಗಿ ಬ೦ದ ಮೇಲೆ ಸುಮಾರು 6500 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದ್ದೇನೆ. ಯಾವುದೇ
ಕೆಲಸವಾದರೂ ಕಾನೂನಾತ್ಮಕವಾಗಿ ಆಗಬೇಕಾಗುತ್ತದೆ. ಕಾರ್ಪೊರೇಟರ್‌ಗಳು ಅಧಿಕಾರಿಗಳ ಸಹಿತ ಎಲ್ಲರೂ ಸಹಕಾರ ಮಾಡಿದ್ದರಿ೦ದ ಸಾಧ್ಯವಾಗಿದೆ ಎ೦ದು ಶ್ಲಾಘಿಸಿದರು.
ವೇದಿಕೆಯಲ್ಲಿ ಡಾ.ಭರತ್ ಶೆಟ್ಟಿ ವೈ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಮನಪಾ ಸದಸ್ಯ ರಾದ ಸುನೀತಾ,ಸುಮಿತ್ರ ಕರಿಯಾ, ರಾಜೇಶ್ ಸಾಲ್ಯಾನ್, ಲಕ್ಷ್ಮೀ ಶೇಖರ್ ದೇವಾಡಿಗ, ಪ್ರಶಾ೦ತ್ ಮೂಡಾಯಿಕೋಡಿ, ಪ್ರಮುಖರಾದ ಅರವಿಂದ್ ಬೆಂಗ್ರೆ, ರಘುವೀರ್, ಉಪತಹಶೀಲ್ದಾರ್ ನವೀನ್, ಬಿಜೆಪಿ ಮುಖಂಡರು ಶಕ್ತಿ ಕೇಂದ್ರದ ಮುಖಂಡರು , ಕಾರ್ಯಕರ್ತರು, ಕಂದಾಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು
You Might Also Like
ಉಳ್ಳಾಲ: ರಿಕ್ಷಾ ಮರಕ್ಕೆ ಢಿಕ್ಕಿ – ಓರ್ವ ಸಾವು, ಇಬ್ಬರಿಗೆ ಗಾಯ – ಕಹಳೆ ನ್ಯೂಸ್
ಉಳ್ಳಾಲ: ಆಟೋ ರಿಕ್ಷಾ ಒಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಕೊಣಾಜೆ ಪುಳಿಂಚಾಡಿ ಇಳಿಜಾರು ಪ್ರದೇಶದಲ್ಲಿ...
ಕಡಬ : ಮಿನಿ ಗೂಡ್ಸ್ ಮತ್ತು KSRTC ಬಸ್ ನಡುವೆ ಅಪಘಾತ – ಕಹಳೆ ನ್ಯೂಸ್
ಕಡಬ : KSRTC ಬಸ್ ಮತ್ತು ಮಿನಿ ಗೂಡ್ಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ಹೊಸಮಠ ಸಮೀಪದ ದೇರಾಜೆಯಲ್ಲಿ ನಡೆದಿದೆ. ಕಡಬದಿಂದ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ – ಕಹಳೆ ನ್ಯೂಸ್
ಬಂಟ್ವಾಳ - ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ . ತಾಲೂಕು ಕೆದಿಲ ಗ್ರಾಮದ ಬೀಟಿಗೆ ದಿವಂಗತ ಮೋನು ಅವರ ಧರ್ಮ ಪತ್ನಿ...
ಮಡಿಕೇರಿ ಯಲ್ಲಿ ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ.- ಕಹಳೆ ನ್ಯೂಸ್
ಮಡಿಕೇರಿ: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ ಮಾಡಿದ ಘಟನೆ ನ.23ರ ಶನಿವಾರ ಮಧ್ಯಾಹ್ನ ಸೋಮವಾರಪೇಟೆ ಪಟ್ಟಣದಲ್ಲಿ ನಡೆದಿದೆ. ಪರಾರಿಯಾಗುವ ಸಂದರ್ಭ ಕಳ್ಳರು...