Recent Posts

Monday, January 20, 2025
ಸುದ್ದಿ

ಅಟಲ್ ಬಿಹಾರಿ ವಾಜಪೇಯಿ ಪುಣ್ಯ ಸ್ಮರಣೆ ; ಮೂಡಬಿದಿರೆ ನಗರ ಶಕ್ತಿಕೇಂದ್ರದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ – ಕಹಳೆ ನ್ಯೂಸ್

ಮೂಡಬಿದಿರೆ: ನಗರ ಶಕ್ತಿಕೇಂದ್ರದ ವತಿಯಿಂದ ಮಾಜಿ ಪ್ರಧಾನ ಅಟಲ್ ಬಿಹಾರಿ ವಾಜಪೇಯಿ ಪುಣ್ಯ ಸ್ಮರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಪುರಸಭಾ ವ್ಯಾಪ್ತಿಯ ಬೂತ್ ನಂ.5 ಮತ್ತು 6ರ ಗಾಂಧೀನಗರ ಕಡದಬೆಟ್ಟುವಿನಲ್ಲಿ ಸ್ವಚ್ಛತಾ ಅಭಿಯಾನ ಭಾನುವಾರ ನಡೆಯಿತು. ನಗರ ಶಕ್ತಿಕೇಂದ್ರದ ಅಧ್ಯಕ್ಷ ರಾಜೇಶ್ ಮಲ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಕ್ಕಳಲ್ಲಿ ಸ್ವಚ್ಛತಾ ಜಾಗೃತಿ ಮೂಡುವಂತಾಗಬೇಕಾಗಿದೆ. ಪರಿಸರ ಸ್ವಚ್ಚತೆ ಜೊತೆಗೆ ಪ್ರತೀ ಮನೆ ಮನೆಗಳಲ್ಲಿ ಸ್ವಚ್ಛತೆ ಕಾರ್ಯ ನಡೆಯಬೇಕಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುರಸಭಾ ಸದಸ್ಯರಾದ ನಾಗರಾಜ್ ಪೂಜಾರಿ, ಪ್ರಸಾದ್ ಭಂಡಾರಿ, ಲಕ್ಷ್ಮಣ್ ಸ್ಥಳೀಯ ಪ್ರಮುಖರಾದ ರಾಹುಲ್ ಕುಲಾಲ್, ವಿಜೇಶ್, ಜಗದೀಶ್ ಎಂ.ಕೆ, ಸುರೇಂದ್ರ, ಕಿರಣ್, ನಾಗೇಶ, ಮನೋಹರ್, ಪ್ರದೀಪ್, ಅಣ್ಣು ಕಡದಬೆಟ್ಟು, ಕಾಂತು ಕಡದಬೆಟ್ಟು, ಸುಧಾಕರ್ ಗಾಂಧೀನಗರ, ಭರತ್ ಗಾಂಧೀನಗರ ಮೊದಲಾದವರಿದ್ದರು.

ವರದಿ : ರಾಜೇಶ್ ಮಂದಾರ,ಮೂಡಬಿದ್ರೆ
          8088188339