ಬಂಟ್ವಾಳದ ಬರಿಮಾರುಗುತ್ತು ಧರ್ಮಚಾವಡಿಯಲ್ಲಿ ಮಾ. 28 ಮತ್ತು 29ರಂದು ನಡೆಯಲಿದೆ ಗುಜರಾನ್ ಕುಟುಂಬಸ್ಧರ ಶ್ರೀ ದೈವಗಳ ನೇಮೋತ್ಸವ – ಕಹಳೆ ನ್ಯೂಸ್
ಬಂಟ್ವಾಳ : ಬಂಟ್ವಾಳದ ಬರಿಮಾರುಗುತ್ತು ಧರ್ಮಚಾವಡಿಯಲ್ಲಿ ಶ್ರೀ ದೈವಗಳ ನೇಮೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಮಾರ್ಚ್ 28 ಮತ್ತು 29 ರಂದು ನಡೆಯಲಿದೆ.
ಗುಜರಾನ್ ಕುಟುಂಬಸ್ಧರಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ದೈವಗಳ ನೇಮೋತ್ಸವವು, ಕುಟುಂಬದ ತಂತ್ರಿಗಳಾದ ಶ್ರೀ ಕೇಶವ ಶಾಂತಿ ಪುರೋಹಿತರು ನಾಟಿ ನರಿಕೊಂಬು ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಮಾರ್ಚ್ 28 ರಂದು ಬೆಳಿಗ್ಗೆ ಗಣಪತಿ ಹೋಮ, ಗುರುಪೀಠ ಪೂಜೆ, ನವಕ ಕಲಶ, ಪ್ರಧಾನ ಪೂಜೆನಡೆದ ಬಳಿಕ, ಕಟ್ಟೆಯಲ್ಲಿ ಬೋಳ್ಳೆಮಾರ್ ಪಂಜುರ್ಲಿ ಪ್ರತಿಪ್ಠೆ ಮತ್ತು ಚಾಮುಂಡಿ ಗುಳಿಗ ಪ್ರತಿಷ್ಠೆ, ದೈವಗಳ ಶುದ್ಧಿ, ಶ್ರೀ ವೆಂಕಟರಮಣ ದೇವರ ಮುಡಿಪು ಸೇವೆ, ದೈವಗಳಿಗೆ ಪರ್ವ, ತಂಬಿಲ ಪ್ರಸನ್ನ ಪೂಜೆ, ನಡೆದ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಭಂಡಾರ ತೆಗೆದು, ರಾತ್ರಿ ರಕ್ತೇಶ್ವರೀ ನೇಮ ಹಾಗೂ ಚಾಮುಂಡಿ ಗುಳಿಗ ನೇಮ, ಕಲ್ಲುರ್ಟಿ,ಪಂಜುರ್ಲಿ ನೇಮ ನಡೆಯಲಿದ್ದು ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ 29 ರ ಸಂಜೆ ಸಂಜೆ ಭಂಡಾರ ಇಳಿಯುವುದು ಸೆಲ್ಲದಿ ಮತ್ತು ಪೊಸಪ್ಪೆ ಕೋಲ, ವರ್ಣರ ಪಂಜುರ್ಲಿಗೆ ಎಣ್ಣೆ ಬೂಲ್ಯ, ಅಗ್ನಿ ಕೊರತಿಗೆ ನೇಮ, ಮತ್ತು ಕೆಂಡ ಸೇವೆ, ಪಂಜುರ್ಲಿ ನೇಮೋತ್ಸವ, ರಾಹುಗುಳಿಗ ಕೋಲ ಹಾಗೂ ಕೊರಗತನಿಯ ಕೋಲ ನಡೆದು, ಬಳಿಕ ರಾತ್ರಿ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಈ ಪುಣ್ಯ ಕಾರ್ಯಕ್ಕೆ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಗುಜರನ್ ಕುಟುಂಬದ ಮುಖ್ಯಸ್ಥರು ಹಾಗೂ ಸರ್ವಸದಸ್ಯರು ವಿನಂತಿಸಿಕೊಂಡಿದ್ದಾರೆ