ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಸಿ ರೋಡ್ ಸೇತುವೆ ಬಳಿ ಗಾಡಿ ಪತ್ತೆಯಾಗಿದ್ದು, ಬಳಿಕ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಪುತ್ತೂರಿನ ಕೆಮ್ಮಿಂಜೆ ನಿವಾಸಿ ವಿಘ್ನೇಶ್ ಕಾಮತ್(29) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ಮೃತರು ಪುತ್ತೂರಿನ ಕೋರ್ಟ್ ರೋಡ್ ನಲ್ಲಿ ಅಂಗಡಿ ಹೊಂದಿದ್ದರು.
ನದಿಯಲ್ಲಿದ್ದ ಶವವನ್ನು ಸ್ಥಳೀಯರು ಮೇಲಕ್ಕೆತ್ತಿದ್ದು, ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ.