Recent Posts

Monday, January 20, 2025
ಬೆಂಗಳೂರುರಾಜ್ಯಸುದ್ದಿ

JDS ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿ 15 ಜಾನುವಾರು ಸಾವು – ಕಹಳೆ ನ್ಯೂಸ್

ಯಾದಗಿರಿ: ಜೆಡಿಎಸ್ (JDS) ಸಮಾವೇಶದಲ್ಲಿ ಉಳಿದಿದ್ದ ಆಹಾರ ಸೇವಿಸಿದ 15 ಜಾನುವಾರುಗಳು (Cattle) ಸಾವನ್ನಪ್ಪಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಗುರುಮಿಠಕಲ್​ನಲ್ಲಿ (Gurmitkal) ನಡೆದಿದೆ. ಕೆಲವು ಅಸ್ವಸ್ತ ಜಾನುವಾರುಗಳು ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾರ್ಚ್ 24ರಂದು ಗುರಮಿಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶರಣಗೌಡ ಕಂದಕೂರ್ (JDS Candidate Sharanagowda Kandakur) ಯರಗೋಳ ಗ್ರಾಮದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ (JDS Pancharatna Yatre) ಆಯೋಜನೆ ಮಾಡಿದ್ರು. ಕಾರ್ಯಕ್ರಮಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy) ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ಹೆಚ್​ ಡಿ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶರಣಗೌಡ ಕಂದಕೂರ್, ಸಮಾವೇಶಕ್ಕೆ ಆಗಮಿಸಿದ್ದ ಕಾರ್ಯಕರ್ತರಿಗಾಗಿ ಔತಣಕೂಟ ಸಹ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ಕೃಷಿ ಜಮೀನುಗಳಲ್ಲಿ ಚೆಲ್ಲಲಾಗಿತ್ತು. ಇದೇ ಆಹಾರವನ್ನು ಸೇವಿಸಿದ ಜಾನುವಾರುಗಳು ಸಾವನ್ನಪ್ಪಿವೆ. ಆಹಾರ ಕೆಟ್ಟಿದ್ದರಿಂದ ಜಾನುವಾರುಗಳಿಗೆ ವಿಷವಾಗಿ ಬದಲಾಗಿದೆ.

30-35 ಜಾನುವಾರುಗಳು ಅಸ್ವಸ್ಥ

ಯರಗೋಳ ಗ್ರಾಮದಲ್ಲಿಯ ರೈತರು ತಮ್ಮ ಜಾನುವಾರಗಳನ್ನು ಪ್ರತಿನಿತ್ಯ ಮೇಯಲು ಬಿಡುತ್ತಾರೆ. ಆದರೆ ಮಾರ್ಚ್ 25ರಂದು ಹೋಗಿದ್ದ ಜಾನುವಾರುಗಳು ಸಂಜೆಯಾದ್ರೂ ಮನೆಗೆ ಹಿಂದಿರುಗಿರಲಿಲ್ಲ. ರೈತರು ಹುಡುಕಿ ಹೊರಟಾಗ ಕಾರ್ಯಕ್ರಮ ಆಯೋಜನೆಯ ಸ್ಥಳದಲ್ಲಿ ಸುಮಾರು 30-35 ಜಾನುವಾರುಗಳು ಅಸ್ವಸ್ಥವಾಗಿರೋದು ಕಂಡು ಬಂದಿದೆ.

5 ರಿಂದ 6 ಕೆಜಿಯಷ್ಟು ಅನ್ನ ತಿಂದಿರುವ ಶಂಕೆ

ಕೂಡಲೇ ಗ್ರಾಮಸ್ಥರು ಪಶು ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ 8.45ಕ್ಕೆ ಆಗಮಿಸಿದ ಪಶುಸಂಗೋಪನಾ ಇಲಾಖೆ ಉಪನಿರ್ದೇಶ ರಾಜು ದೇಶಮುಖ್, ಜಾನುವಾರುಗಳನ್ನು ಪರಿಶೀಲಿಸಿ, ಮರಣೋತ್ತರ ಶವ ಪರೀಕ್ಷೆ ಸಹ ನಡೆಸಿದ್ದಾರೆ. ಸುಮಾರು 9 ಜಾನುವಾರುಗಳು ಸಾವನ್ನಪ್ಪಿವೆ. ಸುಮಾರು 5-6 ಕೆಜಿಯಷ್ಟು ಅನ್ನವನ್ನು ತಿಂದಿದ್ದರಿಂದ ಹೊಟ್ಟೆ ಉಬ್ಬರವಾಗಿ ಜಾನುವಾರುಗಳು ಸಾವನ್ನಪ್ಪಿವೆ.

ಉಳಿದ ಆಹಾರ ವೈಜ್ಞಾನಿಕವಾಗಿ ವಿಲೇವಾರಿ

ಭಾನುವಾರ ಮತ್ತೆ ಆರು ಜಾನುವಾರುಗಳು ಚಿಕಿತ್ಸೆ ಪಡೆದುಕೊಳ್ಳುತ್ತಿವೆ. 20 ಜಾನುವಾರುಗಳು ಚೇತರಿಸಿಕೊಂಡಿವೆ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶ ರಾಜು ದೇಶಮುಖ್ ಮಾಹಿತಿ ನೀಡಿದ್ದಾರೆ. ಘಟನೆ ಬಳಿಕ ಎಚ್ಚೆತ್ತ ಗ್ರಾಮ ಪಂಚಾಯ್ತಿ, ಉಳಿದಿದ್ದ ಆಹಾರವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ.