Monday, January 20, 2025
ಸುದ್ದಿ

ಕಾಟಿಪಳ್ಳದಲ್ಲಿ 1 ಕೋಟಿ 70 ಲಕ್ಷ ರೂ ವೆಚ್ಚದಲ್ಲಿ ನಡೆಯಲಿರು ಅಭಿವೃದ್ಧಿಗೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

1 ಕೋಟಿ 70 ಲಕ್ಷ ರೂ ವೆಚ್ಚದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕಾಟಿಪಳ್ಳ‌ 3ನೇ ವಾರ್ಡ್‌ನಲ್ಲಿ ಗುದ್ದಲಿ ಪೂಜೆ‌ ಹಾಗೂ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆಯನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಗಣೇಶಪುರ ಮೈದಾನದ ಬಳಿ ಉದ್ಯಾನವನಕ್ಕೆ ಗುದ್ದಲಿ ಪೂಜೆ, 2 ನೇ ವಿಭಾಗ ಸರಕಾರಿ ಶಾಲೆಯ ಮುಂದುವರಿದ ಕೊಠಡಿ ನಿರ್ಮಾಣಕ್ಕೆ ಗುದ್ದಲಿ‌ ಪೂಜೆ, ಆದರ್ಶ ಯುವಕ‌ ಮಂಡಲ(ರಿ) ಕಟ್ಟಡ ಮೇಲ್ವಾಚಾವಣಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮತ್ತ

ಆದಿಶಕ್ತಿ ದೇವಸ್ಥಾನ ದಿಂದ ಹಿಂದೂ ರುದ್ರಭೂಮಿಯ ಮುಖ್ಯರಸ್ತೆಯ ಕಾಂಕ್ರೀಟಿಕರಣದ ಲೋಕಾರ್ಪಣೆ, ಕಾಟಿಪಳ್ಳ‌ ಹಿಂದೂ‌ ರುದ್ರಭೂಮಿಯ ಲೋಕಾರ್ಪಣೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಯರ್ ಜಯಾನಂದ ಅಂಚನ್‌,

ಕಾಟಿಪಳ್ಳ‌ 3ನೇ ವಾರ್ಡ್ ಮ.ನ.ಪಾ ಸದಸ್ಯರಾದ ಶ್ರೀ ಲೋಕೇಶ್ ಬೊಳ್ಳಾಜೆ, 6ನೇ ವಾರ್ಡ್ ಮ.ನ.ಪಾ ಸದಸ್ಯರಾದ ಸರಿತಾ ಶಶಿಧರ್ , ಬಿಜೆಪಿ ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್‌ರಾಜ್ ಕೃಷ್ಣಾಪುರ, ಅ.ಭಾ.ಸೇ.ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಜಯಕುಮಾರ್, ಹಿಂದು ರುದ್ರಭೂಮಿ ನವೀಕರಣ ಸಮಿತಿ ಸದಸ್ಯರು, ಪಂಚಾಯತ್ ಸದಸ್ಯರಾದ ನವಿನ್ ಶೆಟ್ಟಿ ಮತ್ತು ಪದ್ಮನಾಭ ಸಾಲ್ಯಾನ್ ಹಾಗೂ ವಿವಿಧ‌ ಜವಾಬ್ದಾರಿಯುತ ಮಂಡಲ ಪ್ರಮುಖರು, ಶಕ್ತಿಕೇಂದ್ರ ಪ್ರಮುಖರು, ವಾರ್ಡ್ ಪ್ರಮುಖರು, ಬೂತ್ ಪ್ರಮುಖರು, ಪಕ್ಷದ ಕಾರ್ಯಕರ್ತರು, ಊರಿನ ಜವಬ್ದಾರಿಯುತ ನಾಗರಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.