Sunday, January 19, 2025
ಉಡುಪಿಕ್ರೈಮ್ಸುದ್ದಿ

ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದ ಅಹಮ್ಮದ್ ಕಬೀರ್ ಹಾಗೂ ಅಬ್ದುಲ್ ಖಾದರ್ ; 5 ಲಕ್ಷ ರೂ. ನಗದು ಮತ್ತು ಕಾರನ್ನು ವಶಕ್ಕೆ ಪಡೆದ ಪಡುಬಿದ್ರಿ ಪೊಲೀಸರು – ಕಹಳೆ ನ್ಯೂಸ್

ಪಡುಬಿದ್ರಿ, ಮಾ 27 : 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಹೆಜಮಾಡಿ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ನಡೆಸಿದ ತಪಾಸಣೆ ವೇಳೆ ವೇಳೆ ದಾಖಲೆ ಇಲ್ಲದೆ ಸಾಗಿಸುತ್ತಿದ್ದ5 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಡುಬಿದ್ರಿ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರ ಪುರುಷೋತ್ತಮ ಎ ಇವರು ಹೆಜಮಾಡಿ ಚೆಕ್ ಪೋಸ್ಟ್ ನಲ್ಲಿ ಮಾ. 26ರಂದು ಕರ್ತವ್ಯದಲ್ಲಿರುವಾಗ ಸಂಜೆ 4:35ರ ವೇಳೆಗೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ ಟೊಯೆಟಾ ಗ್ಲಾಂಝಾ ಬಿಳಿ ಬಣ್ಣದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಚಾಲಕನ ಎಡ ಬದಿಯ ಟೂಲ್ಸ್ ಬಾಕ್ಸ್ ಒಳಗಡೆ ಕೈ ಚೀಲ ದೊರಕ್ಕಿದ್ದು, ಇದನ್ನು ಪರಿಶೀಲಿಸಿದಾಗ ಅದರೊಳಗೆ 500 ರೂಪಾಯಿ ಮುಖ ಬೆಲೆಯ ಭಾರತೀಯ ಕರೆನ್ಸಿ ನೋಟುಗಳಿರುವ ಒಟ್ಟು ಸೇರಿಸಿ ಬಂಡಲ್ ಮಾಡಿ ಇಟ್ಟಿರುವ ಹಣ ಕಂಡುಬಂದಿದೆ.

ಈ ಹಣದ ಕುರಿತು ಕಾರಿನ ಚಾಲಕ ಅಹಮ್ಮದ್ ಕಬೀರ್ ಹಾಗೂ ಕಾರಿನಲ್ಲಿದ್ದ ಅಬ್ದುಲ್ ಖಾದರ್ ಜೈಲಾನಿ ಎಂಬುವರನ್ನು ವಿಚಾರಿಸಿದಾಗ ಈ ಹಣದ ಬಗ್ಗೆ ದಾಖಲಾತಿ ಹಾಗೂ ತೃಪ್ತಿಕರವಾದ ಉತ್ತರವನ್ನು ನೀಡಿರುವುದಿಲ್ಲ, ಆದ್ದರಿಂದ ರೂಪಾಯಿ 5 ಲಕ್ಷ ಹಣ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023, ಕಲಂ: 98 ಕೆ.ಪಿ. ಕಾಯ್ದೆ. ಯಂತೆ ಪ್ರಕರಣ ದಾಖಲಾಗಿದೆ