Sunday, January 19, 2025
ಸುದ್ದಿ

6ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೂಳ್ಳಲಿರುವ ಕಾರ್ ಲ್ಯಾಂಡ್ ಮೆಗಾ ಯೋಜನೆಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಚಾಲನೆ – ಕಹಳೆ ನ್ಯೂಸ್

ಮಂಗಳೂರು ನಗರ ಉತ್ತರದ ಪಾಲಿಕೆ ವ್ಯಾಪ್ತಿಯ 16ನೇ ಬಂಗ್ರ ಕೂಳೂರು ವಾರ್ಡ್ನ ದಂಬೆಲ್ ಸೇತುವೆಯ ನದಿ ತಟದಿಂದ ಕಾರ್ ಲ್ಯಾಂಡ್ ನಿರ್ಮಾಣ ಕಾಮಗಾರಿಗೆ
6 ಕೋಟಿ ರೂ.ಗಳನ್ನು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಅನುದಾನ ಕಾದಿರಿಸಿದ್ದು, ದಂಬೆಲ್ ಗಣಪತಿ ವಿಸರ್ಜನೆ ಕಟ್ಟೆ ಬಳಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭ ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ,ಸ್ಥಳೀಯ ಮನಪಾ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಬಿಜೆಪಿ ಪ್ರಮುಖರಾದ ಉಮೇಶ್ ಮಲರಾಯಸಾನ, ಆನಂದ್ ನಾಯ್ಕ್, ನವನೀತ್ ಕೋಟ್ಯಾನ್, ರಾಜೇಂದ್ರ ಕೋಟ್ಯಾನ್, ಜನಸೇವಾ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್,ಸದಾನಂದ ಅಂಚನ್, ಬಾಲಕೃಷ್ಣ ಶೆಟ್ಟಿ, ಆನಂದ್ ಕೋಡಿಕಲ್ ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು