Sunday, January 26, 2025
ಸುದ್ದಿ

ನಮೀಬಿಯಾದಿಂದ ಭಾರತಕ್ಕೆ ತರಲಾಗಿದ್ದ ಹೆಣ್ಣು ಚಿರತೆಯೊಂದು ಸಾವು – ಕಹಳೆ ನ್ಯೂಸ್

ಕಳೆದ ವರ್ಷ ನಮೀಬಿಯಾದಿಂದ ತರಲಾಗಿದ್ದ ಹೆಣ್ಣು ಚಿರತೆಯೊಂದು ಮೂತ್ರಪಿಂಡದ ಸೋಂಕಿನಿಂದ ಮೃತಪಟ್ಟಿದೆ.
ಕಳೆದ ವರ್ಷ ಭಾರತದಲ್ಲಿ ಚೀತಾಗಳ ಮರುಪರಿಚಯ ಪ್ರಾಜೆಕ್ಟ್ ಅಂಗವಾಗಿ ನಮೀಬಿಯಾದಿಂದ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಎಂಟು ಚೀತಾಗಳನ್ನ ತರಲಾಗಿತ್ತು. ಈ ಪೈಕಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಇದ್ದವು. ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದು ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನ ಬಿಡುಗಡೆ ಮಾಡಿದ್ದರು.
ಈ ಪೈಕಿ ಸಶಾ ಹೆಸರಿನ ಹೆಣ್ಣು ಚಿರತೆ ಮೂತ್ರಪಿಂಡದ ಸೋಂಕಿನಿಂದ ಮೃತಪಟ್ಟಿದೆ ಎಂದು ಚಿರತೆ ಸಂರಕ್ಷಣಾ ನಿಧಿಯ ವಕ್ತಾರ ಸುಸಾನ್ ಯನ್ನೆಟ್ಟಿ ಅವರು ದೃಢಪಡಿಸಿದ್ದಾರೆ.
“ಸಶಾ ಮೂತ್ರಪಿಂಡದ ಸೋಂಕಿನಿಂದ ಬಳಲುತ್ತಿದ್ದಾಳೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾಳೆ” ಎಂದು ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಹೇಳಿದ್ದರು.
“ಇಷ್ಟುದಿನ ಕ್ವಾರಂಟೈನ್‌ನಲ್ಲಿದ್ದಳು. ಇದೀಗ ಮೃದು ಪರಭಕ್ಷಕ ಮುಕ್ತ ಪ್ರದೇಶಕ್ಕೆ ಹೊಂದಿಕೊಳ್ಳುತ್ತಿದ್ದಾಳೆ. ಆಕೆಗೆ ದೌರ್ಬಲ್ಯ ಇರುವುದರಿಂದ ಎಮ್ಮೆ ಮಾಂಸ ನೀಡಲಾಗುತ್ತಿದೆ” ಎಂದು ಸುಮಾರು ಒಂದು ತಿಂಗಳ ಹಿಂದೆ ಮಾಹಿತಿ ನೀಡಿದ್ದರು.
ಕಳೆದ ಎರಡು ತಿಂಗಳಿನಿಂದ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು. ಭಾರತಕ್ಕೆ ಬರುವ ಮುನ್ನವೇ ಇದಕ್ಕೆ ಕಿಡ್ನಿ ಸಮಸ್ಯೆ ಇತ್ತು. ಈಗ ಆಪರೇಷನ್ ಮಾಡಿದ್ರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ ಎಂದು ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು