Recent Posts

Monday, January 27, 2025
ಸುದ್ದಿ

ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಆಗಿದ್ಯಾ? : ಯಾಕೆ ಲಿಂಕ್ ಮಾಡಬೇಕು ಗೊತ್ತಾ..? ಸಂಪೂರ್ಣ ಮಾಹಿತಿ – ಕಹಳೆ ನ್ಯೂಸ್

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದ್ಯಾ? ಆಗಿಲ್ಲ ಅಂದ್ರೆ ಮಾರ್ಚ್ 31ರೊಳಗೆ ಲಿಂಕ್ ಮಾಡಬೇಕಂತೆ ರ‍್ರೆ.. ಆ ಬಳಿಕ ಲಿಂಕ್ ಮಾಡಬೇಕಾದ್ರೆ 10 ಸಾವಿರ ರೂಪಾಯಿ ಫೈನ್ ಕಟ್ಟಬೇಕಂತೆ.. ! ಇದು ಸದ್ಯ ಎಲ್ಲರ ಬಾಯಲ್ಲೂ ಎಲ್ಲರ ತಲೆಯಲ್ಲೂ ಓಡ್ತಾ ಇರೋ ವಿಚಾರ. ಪ್ಯಾನ್ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಏನಾಗುತ್ತೆ..? ಯಾಕೆ ಲಿಂಕ್ ಮಾಡಬೇಕು ಈ ಎಲ್ಲಾ ವಿಚಾರಗಳ ಸ್ಪಷ್ಟ ಹಾಗೂ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಯೊಬ್ಬರು ತಮ್ಮ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕಡ್ಡಾಯ. ಇದಕ್ಕಾಗಿ ಕೇಂದ್ರ ಸರ್ಕಾರದ ನೇರ ತೆರಿಗೆ ಮಂಡಳಿ ಮಾರ್ಚ್ 31ರ ಗಡುವು ವಿಧಿಸಿದೆ. ಕಳೆದ ವರ್ಷ ಮಾರ್ಚ್ನಲ್ಲೇ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಒಂದು ಸುತ್ತೋಲೆಯನ್ನ ಹೊರಡಿಸಿತ್ತು. ಆ ಸುತ್ತೋಲೆ ಪ್ರಕಾರ 2022ರ ಮಾರ್ಚ್ 31ರ ಒಳಗೆ ಪ್ಯಾನ್, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಒಂದು ವೇಳೆ ಲಿಂಕ್ ಮಾಡದಿದ್ರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುತ್ತದೆ.
ಮಾರ್ಚ್ 31, 2022ಕ್ಕೂ ಮೊದಲು ಆಧಾರ್, ಪ್ಯಾನ್ ಲಿಂಕ್ ಮಾಡೋದು ಉಚಿತವಾಗಿತ್ತು. ಏಪ್ರಿಲ್ 1, 2022ರಿಂದ 500 ರೂಪಾಯಿ ದಂಡ ಹಾಕಲಾಯ್ತು. ಜುಲೈ 1, 2022ರಿಂದ ಶುಲ್ಕದ ಮೊತ್ತವನ್ನು 1000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಆದಾಯ ತೆರಿಗೆ ಇಲಾಖೆಯ hಣಣಠಿs://ತಿತಿತಿ.iಟಿಛಿomeಣಚಿx.gov.iಟಿ/ieಛಿ/ಜಿoಠಿoಡಿಣಚಿಟ/ ಈ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.

ಆಧಾರ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಏನಾಗುತ್ತೆ ಅನ್ನೋದನ್ನ ನೋಡೋಣ..
ಏಪ್ರಿಲ್ 1ರಿಂದ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರೀಯಗೊಳ್ಳುತ್ತದೆ.
50,000ಕ್ಕೂ ಹೆಚ್ಚಿನ ಹಣವನ್ನು ಠೇವಣಿ ಇಡಲು ಆಗಲ್ಲ.
50,000ಕ್ಕೂ ಹೆಚ್ಚಿನ ಹಣವನ್ನು ಈ ಆಯಲ್ಲಿ ಇಡೋದಿಕ್ಕೆ ಆಗಲ್ಲ.
TDS/TCS ಕಡಿತಗೊಳ್ಳುವ ಮೊತ್ತ ಹೆಚ್ಚಾಗುತ್ತದೆ.
ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡಲು ಆಗಲ್ಲ.
ಮ್ಯೂಚುವಲ್ ಫಂಡ್ ಹೂಡಿಕೆ ಸಾಧ್ಯವಿಲ್ಲ.
ಹೂಡಿಕೆದಾರರ NSE ಮತ್ತುBSEವರ್ಗಾವಣೆ ಆಗಲ್ಲ.
ಪ್ಯಾನ್ ಇಲ್ಲದಿದ್ರೆ ವಿದೇಶಿ ಕರೆನ್ಸಿಕೊಳ್ಳಲು ಆಗುವುದಿಲ್ಲ.

ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡೋದೆಲ್ಲ ಬೇಕಿತ್ತಾ. ಇದಕ್ಕಾಗಿ ಇನ್ನು ಎಷ್ಟು ಅಲೆದಾಟ ಮಾಡಬೇಕೇ..? ಎಂದು ಯೋಚಿಸೋರು ಅನೇಕರಿದ್ದಾರೆ. ಆದರೆ ಈ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯಗೊಳಿಸೋದಿಕ್ಕೊ ಕಾರಣವಿದೆ. ಕೆಲವರ ಬಳಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‍ಗಳು ಇದ್ದದ್ದು ಕಂಡು ಬಂದಿದೆ. ಅಲ್ಲದೇ ದೇಶಾದ್ಯಂತ ನಕಲಿ ಪ್ಯಾನ್ ಕಾರ್ಡ್‍ಗಳು ಚಲಾವಣೆಯಲ್ಲಿದ್ದು, ಇದರಿಂದ ತೆರಿಗೆಯ ಲೆಕ್ಕಾಚಾರ ಮತ್ತು ಆದಾಯ ತೆರಿಗೆ ಸಂಗ್ರಹಕ್ಕೆ ತೀವ್ರ ಅಡಚಣೆ ಆಗುತ್ತಿತ್ತು. ಹೀಗಾಗಿ ಕೇಂದ್ರ ಸರ್ಕಾರ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಮುಂದಾಗಿದ್ದು, ಆಧಾರ್, ಪ್ಯಾನ್ ಲಿಂಕ್ ಕಡ್ಡಾಯಗೊಳಿಸಿದೆ.

ಯಾರಿಗೆಲ್ಲ ಆಧಾರ್, ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯವಲ್ಲ..
80 ವರ್ಷ ಮೇಲ್ಪಟ್ಟವರು ಲಿಂಕ್ ಮಾಡುವಂತಿಲ್ಲ
ದೇಶದ ಪೌರತ್ವ ಯಾರು ಪಡೆದಿಲ್ಲವೋ ಅವರಿಗೆ ಕಡ್ಡಾಯವಲ್ಲ
ಅನಿವಾಸಿ ಭಾರತೀಯರು
ಅಸ್ಸಾಂ, ಮೇಘಾಲಯ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು, ಕಾಶ್ಮೀರದ ನಿವಾಸಿಗಳಿಗೆ ಕಡ್ಡಾಯವಲ್ಲ.