Sunday, January 26, 2025
ಸುದ್ದಿ

‘ಆಶು.. ಆಶು..’ : 9 ವರ್ಷದ ಬಳಿಕ ಮನೆ ಯಜಮಾನಿಯ ಕೊಲೆಗಡುಕರನ್ನ ಪೊಲೀಸರಿಗೆ ಒಪ್ಪಿಸಿದ ಗಿಳಿ..!? – ಕಹಳೆ ನ್ಯೂಸ್

ಗಿಳಿಯೊಂದು ಮಾಡಿದ ಶಬ್ದದಿಂದ 9 ವರ್ಷಗಳ ಹಿಂದೆ ನಡೆದ ಕೊಲೆಯ ರಹಸ್ಯ ಬಯಲಾಗಿ, ಆರೋಪಿಗಳು ಸೆರೆವಾಸ ಅನುಭವಿಸುವಂತಾಗಿದೆ.
ಉತ್ತರ ಪ್ರದೇಶದ ನೀಲಮ್‌ವಿಜಯ ದಂಪತಿಗಳು ತಮ್ಮ ಮನೆಯಲ್ಲಿ ನಾಯಿ ಹಾಗೂ ‘ಮಿಥುರಾಜ್’ ಎಂಬ ಹೆಸರಿನ ಗಿಳಿಯನ್ನ ಸಾಕ್ತಾ ಇದ್ರು. ನಾಯಿ ಬಹಳ ನಿಷ್ಠೆಯಿಂದ ಇದ್ರೆ, ಇತ್ತ ತನ್ನ ಗಿಳಿಗೆ ಕೆಲವೊಂದು ಶಬ್ದಗಳನ್ನ ಹೇಳಿಕೊಟ್ಟು ಅದು ಕೆಲ ಪದಗಳ ಉಚ್ಚಾರವನ್ನು ಮಾಡ್ತಾ ಇತ್ತು.
2014ರಲ್ಲಿ ಫೆಬ್ರವರಿ 20ರಂದು ನೀಲಮ್ ಎಂಬ ಮಹಿಳೆಯ ಪತಿಯು ವಿಜಯ ಶರ್ಮಾ ತಮ್ಮ ಮಕ್ಕಳ ಜೊತೆ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ ಮನೆಗೆ ನುಗಿದ ನರರಾಕ್ಷಸರು ಮನೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನ ಬರ್ಬರವಾಗಿ ಕೊಲೆ ಮಾಡಿ ಜೊತೆಗೆ ಸಾಕು ನಾಯಿಯನ್ನ ಕೊಂದು, ಬಳಿಕ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬಂದು ನೋಡಿದ್ದಾಗ ಪತ್ನಿ ನೀಲಮ್ ಹಾಗೂ ಸಾಕು ನಾಯಿ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಕೂಡಲೇ ಪತಿ ವಿಜಯ್ ಶರ್ಮಾ ಪೊಲೀಸ್ ಅಧಿಕಾರಿಗೆ ದೂರನ್ನು ನೀಡಿದ್ದರು. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಹಲವು ರೀತಿಯಲ್ಲಿ ವಿಚಾರಣೆ ನಡೆಸಿದ್ದರು ಯಾವುದೇ ಕುರುಹುಗಳು ಸಿಕ್ಕಿರಲಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳು ಸುಮ್ಮನಾಗಿದ್ದಾರೆ.
ಆದರೆ, ನೀಲಮ್ ಕೊಲೆಯ ನೋಡಿದ ಗಿಳಿಯು ಮೂರು ವರ್ಷಗಳ ಕಾಲ ಬೇಸರದಿಂದ ಆಹಾರ ತಿನ್ನುವುದನ್ನು ನಿಲ್ಲಿಸಿತ್ತು. ಇನ್ನು ಗಿಳಿಯ ವರ್ತನೆ ಕಂಡ ವಿಜಯ್‌ಗೆ ಅನುಮಾನ ಮನೆ ಮಾಡಿತ್ತು. ನಂತರ ಗಿಳಿ ಕೆಲವೊಂದು ಶಬ್ಧಗಳನ್ನ ಹೇಳಲು ಪ್ರಾರಂಭ ಮಾಡುತ್ತಿತ್ತು. ಹೀಗೆ ಹೇಳುತ್ತಿದ್ದ ಗಿಳಿ ‘ಆಶು.. ಆಶು..’ ಅಂತಾ ಕೂಗಿದೆ. ಆಶು ಎಂದರೆ ಆರೋಪಿ ಆಶುತೋಷ್ ಎಂದು. ಈ ಆರೋಪಿಯು ವಿಜಯ್ ಶರ್ಮಾ ಅವರ ಮನೆಯಲ್ಲಿಯೇ ಇದ್ದ ಸೋದರಳಿಯ ಆಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮನೆಯಲ್ಲಿದ್ದ ಗಿಳಿಯು ಆಗಾಗ ಆಶು.. ಆಶು.. ಎಂದು ಹೆಸರನ್ನು ಹೇಳುತ್ತಿದ್ದಂತೆ ವಿಜಯ್ ಶರ್ಮಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಅಶುತೋಷ್‌ನನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿ ತಾನೇ ಕೊಲೆ ಮಾಡಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಈ ಕೊಲೆಯಲ್ಲಿ ಭಾಗಿಯಾಗಿದ್ದ ಸ್ನೇಹಿತ ರೊನ್ನಿ ಮಸ್ಸೆಯನ್ನು ಬಂಧಿಸಿ ಆಗ್ರಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಗಿಳಿಯ ಒಂದೇ ಒಂದು ಶಬ್ಧದಿಂದ 9ವರ್ಷಗಳ ಬಳಿಕ ಆರೋಪಿಗಳು ಜೈಲುಪಾಲಾಗಿದ್ದಾರೆ. ತಪ್ಪು ಮಾಡಿ ಆರಾಮವಾಗಿ ಇದ್ರೆ ಕರ್ಮ ಅನ್ನೋದು ನಮ್ಮನ್ನ ಎಂದಿಗೂ ಬಿಡೋದಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ..