ಪತಿ ಬಳಿಕ ಪತ್ನಿ ಗಾಂಜಾ ಮಾರಾಟ ಮಾಡುವುದನ್ನು ಮುಂದುವರೆಸಿದ್ದು, ಗಾಂಜಾ ತರಲು ತನ್ನ ಮೂವರು ಮಕ್ಕಳನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದಾಳೆ.
ಜೈಲಿನಲ್ಲಿಯೆ ಇದ್ದು ಕೊಂಡು ತನ್ನ ಹೆಂಡತಿ ಮಕ್ಕಳಿಂದ ಆರೋಪಿ ಗಾಂಜಾ ದಂಧೆ ಮುಂದುವರೆಸಿದ್ದಾನೆ. ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಮುಜ್ಜು ಎಂಬಾತನ್ನು ಜೆಜೆ ನಗರ ಪೊಲೀಸರು ಆರೆಸ್ಟ್ ಮಾಡಿ ಜೈಲಿಗಟ್ಟಿದ್ದರು. ಇದೀಗ ಆತನ ಹೆಂಡತಿ ನಗ್ಮಾ, ಗಾಂಜಾ ಸಾಗಿಸುವಾಗ ಕಲಾಸಿಪಾಳ್ಯ ಮಹಿಳಾ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ ಪೊಲೀಸರು ಆಕೆಯನ್ನೂ ಜೈಲಿಗಟ್ಟಿದ್ದಾರೆ.
ಗಂಡ-ಹೆಂಡತಿ ಇಬ್ಬರೂ ಪರಪ್ಪನ ಅಗ್ರಹಾರ ಸೇರಿದ್ದು ಮಕ್ಕಳು ಅನಾಥರಾಗಿದ್ದಾರೆ. ಈ ಗಂಡ-ಹೆಂಡತಿ ತಮ್ಮ ಚಿಕ್ಕ ಮಕ್ಕಳನ್ನೇ ಬಳಸಿಕೊಂಡು ಗಾಂಜಾ ದಂಧೆ ನಡೆಸುತ್ತಿದ್ದರು ಎಂಬುವುದು ತಿಳಿದು ಬಂದಿದೆ.
ಇನ್ನೂ ಆರೋಪಿ ಮುಜ್ಜು ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದವನನ್ನ ಜೆಜೆ ನಗರ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ರು. ಬಳಿಕ ಫೀಲ್ಡ್ಗೆ ಇಳಿದ ಪತ್ನಿ ಗಾಂಜಾ ಮಾರಾಟ ಮಾಡುವುದನ್ನು ಮುಂದುವರೆಸಿದ್ದು, ತನ್ನ 1, 3, 7ವರ್ಷದ ಮೂವರು ಮಕ್ಕಳನ್ನು ಗಾಂಜಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾಳೆ.
ಮಕ್ಕಳು, ತಾಯಿ ಜೊತೆ ಹೋಗಿ ಬ್ಯಾಗ್‌ನಲ್ಲಿ ಗಾಂಜಾ ತಂದು ಡೀಲ್ ಮಾಡುತ್ತಿದ್ದರು ಎಂದು ಮಾಹಿತಿ ಬಯಲಾಗಿದೆ. 26 ಕೆಜಿ ಗಾಂಜಾ ಜೊತೆಗೆ ಸಿಕ್ಕಿಬಿದ್ದ ಮಹಿಳೆಯನ್ನು ಕಲಾಸಿಪಾಳ್ಯ ಪೊಲೀಸರು ಜೈಲಿಗಟ್ಟಿದ್ದಾರೆ. ಆರೋಪಿ ನಗ್ಮಾ, ವಿಶಾಖಪಟ್ಟಣದಿಂದ ಗಾಂಜಾ ತರುತ್ತಿದ್ದು, ತನ್ನ ಮೂವರು ಮಕ್ಕಳನ್ನು ಜೊತೆಗೆ ವಿಶಾಖಪಟ್ಟಣಗೆ ಕರೆದುಕೊಂಡು ಹೋಗ್ತಾ ಇದ್ದಳು. ಒಂದು ದಿನ ಅಲ್ಲೇ ರೂಂ ಮಾಡಿಕೊಂಡು ಇದ್ದು ಮರು ದಿನ ಚೀಲದಲ್ಲಿ ಗಾಂಜಾ ಸಮೇತ ಬೆಂಗಳೂರಿಗೆ ಬರ್ತಿದ್ದಳು. ಇನ್ನೂ ತಾನು ಬ್ಯಾಗ್ ಜೊತೆಗೆ ಮಕ್ಕಳೊಂದಿಗೆ ಹೋದರೆ ಪೊಲೀಸರು ಕುಟುಂಬದವರು ಹೋಗ್ತಿದ್ದಾರೆ ಅಂತ ಅಂದುಕೊಂಡು ಚೆಕ್ ಮಾಡೋದಿಲ್ಲ ಎಂಬುವುದು ಈಕೆಯ ಪ್ಯಾನ್ ಆಗಿತ್ತು.
ಆದ್ದರಿಂದ ಈಕೆ ಬಸ್‌ನಲ್ಲೇ ಗಾಂಜಾ ತಂದು ಬೆಂಗಳೂರಿನಲ್ಲಿರುವ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದಳು.
ಇದೇ ರೀತಿ ವಿಶಾಖಪಟ್ಟಣದಿಂದ ಗಾಂಜಾ ತರುತ್ತಿದ್ದ ವೇಳೆ ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್‌ನಲ್ಲಿ ನಿಂತಿದ್ದಾಗ ಬ್ಯಾಗ್ ಜೊತೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯಿಂದ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಈ ಬಗ್ಗೆ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.