Thursday, January 23, 2025
ಸುದ್ದಿ

ಮಾ. 30ರಂದು ಬಲ್ನಾಡಿನ “ಪಂಚವಟಿ” ಮನೆಯಲ್ಲಿ ಶ್ರೀರಾಮ ನವಮಿ ಸುವರ್ಣ ಮಹೋತ್ಸವ – ಕಹಳೆ ನ್ಯೂಸ್

ಪುತ್ತೂರು : ಬಲ್ನಾಡಿನ “ಪಂಚವಟಿ” ಮನೆಯಲ್ಲಿ ಮಾ.30ರಂದು ವಿಜೃಂಭಣೆಯಿ0ದ ಶ್ರೀರಾಮ ನವಮಿ ಉತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಹೋತ್ಸವದ ಹಿನ್ನಲೆ ಬೆಳಗ್ಗೆ ದೀಪೋಜ್ವಲನ, ನಾಮ ಸಂಕೀರ್ತನೆ ನಡೆದು ಮಧ್ಯಾಹ್ನ ಶ್ರೀ ರಾಮ ದೇವರ ಜನ್ಮ ಸಂಭ್ರಮಾಚರಣೆ ನಡೆಯಲಿದ್ದು, ಬಳಿಕ ಭಜನಾ ಸಂಕೀರ್ತನೆ ಮೊಳಗಲಿದೆ.

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ, ಗಿರೀಶ್ ರೈ ಕಕ್ಕೆಪದವು, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪದ್ಮನಾಭ ಉಪಾಧ್ಯಾಯ ಅಕ್ಷಯ ಮಾರ್ನಾಡ್ ಲೋಕೇಶ್ ಮುಚ್ಚೂರು ಇತರ ಕಲಾವಿದರೊಳಗೊಂಡ “ಪಂಚವಟಿ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಅಪರಾಹ್ನ ಹನೂಮದಾಗಮನ ನಡೆಯಲಿದ್ದು, ಸುಮಾರು ಸಂಜೆ ವೇಳೆ ಸಭಾ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಕರ್ನಾಟಕ ಉತ್ತರದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧ್ಯಕ್ಷರಾದ ಎಂ ಪದ್ಮನಾಭ ಪೈ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಯಂ. ಸದಾಶಿವ ಭಟ್ ಮುದಲಾಜೆ, ವಿ. ಬಿ. ಅರ್ತಿಕಜೆ, ಹಾಗೂ ಶಿಬರ ಜಯರಾಮ ಕೆದಿಲಾಯ ಅವರಿಗೆ ಸನ್ಮಾನದ ಗೌರವಾರ್ಪಣೆ ನಡೆಯಲಿದೆ.

ಶ್ರೀರಾಮ ನವಮಿ ಉತ್ಸವದಲ್ಲಿ ಉಡುಪಿಯ ಲತಾಂಗಿ ಸಹೋದರಿಯರಾದ ಕು. ಅರ್ಚನಾ ಮತ್ತು ಕು. ಸಮನ್ವಿಯವರಿಂದ ‘ಶ್ರೀ ರಾಮ ಭಕ್ತಿ ರಸಧಾರೆ’ ಮೇಳೈಸಲಿದೆ. ಇದರ ಜೊತೆಗೆ ವಯಲಿನ್ ಹಾಗೂ ಮೃದಂಗ ಬಾರಿಸುವ ಮೂಲಕ ಮೈಸೂರಿನ ವಿದ್ವಾನ್ ಯಂ ಕೇಶವ, ವಿದ್ವಾನ್ ಸುನಾದ ಕೃಷ್ಣ ಅಮೈ ಮನರಂಜನೆ ನೀಡಲಿದ್ದಾರೆ.