Recent Posts

Sunday, January 19, 2025
ಸಿನಿಮಾಸುದ್ದಿ

ನಟ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಬ್ರೇಕ್ ಅಪ್…! ರಕ್ಷಿತ್ ಶೆಟ್ಟಿ ಹೇಳಿದ್ದೇನು? – ಕಹಳೆ ನ್ಯೂಸ್

ಬೆಂಗಳೂರು, ಸೆ 12 : ಸಿನಿಮಾಗಳ ಕುರಿತ ಗಾಸಿಪ್ ಗಳ ಬಗ್ಗೆ ಪ್ರತಿನಿತ್ಯ ನಾವು ಕೇಳುತ್ತೇವೆ. ಇವುಗಳ ಜತೆಗೆ ಇದೀಗ ಸ್ಯಾಂಡಲ್ ವುಡ್ ನಟ-ನಟಿಯರ ಕುರಿತಂತೆ ಗಾಸಿಪ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಹವಾ ಎಬ್ಬಿಸಿದೆ. ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ಇದೀಗ ಬಿಸಿಬಿಸಿ ಚರ್ಚೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನವಾಗಿದ್ದ ರಕ್ಷಿತ್ ಶೆಟ್ಟಿ ಮೌನ ಮುರಿದಿದ್ದಾರೆ. ನಟಿ ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಕೂಡ ಈಗಾಗಲೇ ಬ್ರೇಕ್ ಅಪ್ ಸುದ್ದಿ ನಿಜ ಎಂದು ಹೇಳಿದ್ದರು. ಇಬ್ಬರ ಕುಟುಂಬಗಳು ಚರ್ಚೆ ನಡೆಸಿ ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಪ್ರತಿಕ್ರಿಯೆ ನೀಡಿದ ಬಳಿಕ ಇದೀಗ ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿಕಾ ತಾಯಿ ಅವರ ಬಳಿಕ ಈಗ ನಟ ರಕ್ಷಿತ್ ಶೆಟ್ಟಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ರೇಕ್ ಅಪ್ ಬಗ್ಗೆ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳು, ತುಂಬಾ ಪ್ರೀತಿಸುತ್ತಿದ್ದ ಮತ್ತು ಜೊತೆಗಿದ್ದಿದನ್ನು ದೂರಮಾಡಿದೆ.’ನಾನು ಯಾರನ್ನು ದೂಷಿಸುವುದಿಲ್ಲ. ‘ನೀವೆಲ್ಲರೂ ರಶ್ಮಿಕಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ನೀಡಿದ್ದೀರಿ. ಈ ಘಟನೆಗಳು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಾನೇನು ಹೇಳುವುದಿಲ್ಲ. ನಾವೆಲ್ಲರೂ ಏನನ್ನು ನೋಡುತ್ತೇವೆ ಅವುಗಳನ್ನು ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕೆಂದೇನಿಲ್ಲ. ಕೆಲವೇ ದಿನಗಳಿಂದ ಸತ್ಯಾಸತ್ಯತೆ ತಿಳಿಯಲಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ರಶ್ಮಿಕಾರನ್ನು ನಾನು ಕಳೆದ ೨ ವರ್ಷಗಳಿಂದ ಹತ್ತಿರದಿಂದ ಕಂಡಿದ್ದೇನೆ. ಅವರ ಬಗ್ಗೆ ನಿಮಗಿಂತ ಹೆಚ್ಚು ನನಗೆ ತಿಳಿದಿದೆ ಎಂದು ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದವುಗಳು. ಇವುಗಳ ಬಗ್ಗೆ ನಂಬಿಕೆ ಇಡುವುದು ಬೇಡ. ಈ ಬಗ್ಗೆ ರಶ್ಮಿಕಾ ಅಥವಾ ನಾನು ಯಾವುದೇ ವಿಚಾರ ತಿಳಿಸಿರಲಿಲ್ಲ ಎಂದು ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.