Thursday, January 23, 2025
ಕ್ರೈಮ್ಬೆಂಗಳೂರುಸುದ್ದಿ

ಗಾಂಜಾ ಕೇಸ್‌ನಲ್ಲಿ ಗಂಡ – ಹೆಂಡತಿ ಜೈಲುಪಾಲು ; ದಂಧೆಗೆ ತನ್ನ ಮಕ್ಕಳನ್ನೇ ಬಳಸಿಕೊಳ್ತಿದ್ದ ಖತರ್ನಾಕ್‌ ಲೇಡಿ ನಗ್ಮಾ- ಕಹಳೆ ನ್ಯೂಸ್

ಬೆಂಗಳೂರು: ಗಾಂಜಾ (Cannabis) ದಂಧೆಗೆ ಮಕ್ಕಳನ್ನ ಬಳಸಿಕೊಳ್ಳುತ್ತಿದ್ದ ತಾಯಿಯ‌ನ್ನು ಬೆಂಗಳೂರಿನ (Bengaluru) ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗ್ಮಾ ಬಂಧಿತ ಆರೋಪಿ. ಗಾಂಜಾ ದಂಧೆಯನ್ನು ನಡೆಸುತ್ತಿದ್ದ ಪತಿಯನ್ನು 6 ತಿಂಗಳ ಹಿಂದಷ್ಟೇ ಜೆ.ಜೆ ನಗರ ಪೊಲೀಸರು ಬಂಧನ (Arrest) ಮಾಡಿ ಜೈಲಿಗೆ ಕಳಿಸಿ‌ದ್ದರು. ಗಂಡನ ದಂಧೆ ಬಗ್ಗೆ ಅರಿತಿದ್ದ ಪತ್ನಿ ನಗ್ಮಾ ಪತಿಯ ಗಾಂಜಾ ದಂಧೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಳು. ದೂರದ ವಿಶಾಖಪಟ್ಟಣದಿಂದ ಗಾಂಜಾ ತಂದು ದುಪ್ಪಟ್ಟು ಹಣಕ್ಕೆ ನಗ್ಮಾ ಮಾರಾಟ ಮಾಡಿ ಹಣ ಮಾಡುತ್ತಿದ್ದಳು. ನಗ್ಮಾಳ ಗಾಂಜಾ ದಂಧೆಯ ಮಾಹಿತಿ ತಿಳಿದ ಪೊಲೀಸರು ನಗ್ಮಾಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಅಲ್ಲಿಗೆ ಗಾಂಜಾ ದಂಧೆಯ ರೂವಾರಿಗಾಳಾದ ದಂಪತಿ ಜೈಲು ಸೇರಿದ್ದಾರೆ.

ದುರಂತ ಅಂದರೆ ವಿಶಾಖಪಟ್ಟಣದಿಂದ ಗಾಂಜಾ ತರಲು ನಗ್ಮಾ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಳು. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಕ್ಕಳನ್ನು ಗಾಂಜಾ ದಂಧೆಗೆ ಬಳಸಿಕೊಳ್ಳುತ್ತಿದ್ದಳು. ಸಾಮಾನ್ಯವಾಗಿ ರೈಲಿನಲ್ಲಿ ಮಕ್ಕಳ ಬ್ಯಾಗ್‌ಗಳನ್ನು ಪೊಲೀಸರು ತಪಾಸಣೆ ಮಾಡುತ್ತಿರಲಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿದ್ದ ನಗ್ಮಾ ಕುಟುಂಬ ಸಮೇತವಾಗಿ ವಿಶಾಖಪಟ್ಟಣಂಗೆ ಹೋಗಿ ಒಂದು ದಿನ ಸ್ಟೇ ಆಗಿ ಕುಟುಂಬದೊಂದಿಗೆ ಮನೆಗೆ‌ ಬರುತ್ತಿದ್ದಳು.

ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20ರಂದು ಗಾಂಜಾ ತಂದಿದ್ದ ನಗ್ಮಾ ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್‌ನಲ್ಲಿ ನಿಂತಿದ್ದಳು. ಈ ವೇಳೆ ಕಲಾಸಿಪಾಳ್ಯ ಪೊಲೀಸರ ಕೈಗೆ ಲಾಕ್ ಆಗಿದ್ದಾಳೆ. ನಗ್ಮಾಳನ್ನು ಬಂಧಿಸಿರುವ ಪೊಲೀಸರು, ಆಕೆಯಿಂದ 13 ಲಕ್ಷ ಮೌಲ್ಯದ 26 ಕೆ.ಜಿ ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ‌. ಸದ್ಯ ಗಂಡ ಹೆಂಡತಿ ಇಬ್ಬರು ಗಾಂಜಾ ಕೇಸ್‌ನಲ್ಲಿ ಜೈಲು ಸೇರಿದ್ದು, ಮಕ್ಕಳು ಅಜ್ಜಿ ಜೊತೆ ಇದ್ದಾರೆ.