ಕಾರ್ಕಳಕ್ಕೆ ಭೇಟಿ ನೀಡಿದ ಮಾಜಿ ಕ್ರಿಕೆಟ್ ಕಪ್ತಾನ ರವಿಶಾಸ್ತ್ರಿ : ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವರಿಗೆ ವಿಶೇಷ ಪೂಜೆ – ಕಹಳೆ ನ್ಯೂಸ್
ಕಾರ್ಕಳ : ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣು ಮೂರ್ತಿ ದೇವಾಲಯಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ರವಿಶಾಸ್ರಿ ಮಂಗಳವಾರ ಭೇಟಿ ನೀಡಿದರು.
ಅವರ ಸಂಬಂಧಿಗಳಾದ ಸಂತೋಷ್ ಶಾಸ್ತ್ರಿ , ಕವಿತಾ ಶಾಸ್ತ್ರೀ ಹಾಗೂ ಕುಟುಂಬದವರು ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ , ಕಲ್ಪೋಕ್ತ ಪೂಜೆ , ನಾಗತಂಬಿಲ ಸೇವೆ ಅರ್ಪಿಸಿದರು ಬಳಿಕ ವಿಷ್ಣು ಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು.
ನರಸಿಂಹ ತಂತ್ರಿ ಹಾಗೂ ಅಶೋಕ್ ಕಾರಂತ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ , ದೇವಾಲಯ ಮೊಕ್ತೇಸರ ಅನಂತ ಪಟ್ಟಾಭಿರಾವ್ , ದೇವಾಲಯ ಅಭಿವೃದ್ದಿಸಮಿತಿಯ ಅಧ್ಯಕ್ಷ ಭೋಜ ಶೆಟ್ಟಿ, ಬ್ರಹ್ಮಕಲಶೋತ್ಸವದ ಕಾರ್ಯದರ್ಶಿ ರಮೇಶ್ ರಾವ್ , ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ಕರ್ನಾಟಕ ಬ್ಯಾಂಕ್ ನ ನಿವೃತ್ತ ಜನರಲ್ ಮ್ಯಾನೇಜರ್ ನಾಗರಜ್ ರಾವ್ , ಸತೀಶ್ ರಾವ್ , ಗೌರವಾಧ್ಯಕ್ಷ ಯುವರಾಜ್ ನಾಯಕ್ , ಚಲನಚಿತ್ರ ನಿರ್ದೇಶಕ ಸಂದೀಪ್ ಶೆಟ್ಟಿ, ಸುಧೀರ್ ಕುಮಾರ್ ಪಡುಬಿದ್ರೆ , ನವೀನ್ ಕುಮಾರ್ ಶೆಟ್ಟಿ, ರಮಾಕಾಂತ್ , ಪವನ್ ಜೈನ್ , ಕಸ್ತೂರಿ ಉಪಸ್ಥಿತರಿದ್ದರು.
ರವಿ ಶಾಸ್ತ್ರಿ ಪೂರ್ವಜರು ಕಾರ್ಕಳ ಎರ್ಲಪಾಡಿಯವರು :
ರವಿ ಶಾಸ್ತ್ರಿ 2007 -2023 ರ ವರೆಗೆ ಒಟ್ಟು ಹನ್ನೊಂದು ಬಾರಿ ಕರ್ವಾಲು ದೇವಸ್ಥಾನ ಕ್ಕೆ ಆಗಮಿಸಿ ನಾಗನಿಗೆ ಪೂಜೆ ಸಲ್ಲಿಸುತ್ತಿದ್ದಾರೆ.ಶಾಸ್ತ್ರಿಯವರ ಪೂರ್ವಜರು ಎರ್ಲಪಾಡಿಯ ಕರ್ವಾಲುಗೆ ಸೇರಿದವರು, ಐವತ್ತರ ದಶಕದಲ್ಲಿ ರವಿಶಾಸ್ರಿಯವರ ಅಜ್ಜ ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು . ಬಳಿಕ ರವಿಶಾಸ್ರಿ ಯ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ ನಲ್ಲಿ ಶಿಕ್ಷಣ ಮುಗಿಸಿ ಮುಂಬಯಿ ನಲ್ಲಿ ಡಾಕ್ಟರ್ ಆಗಿ ಅಲ್ಲೆ ನೆಲೆನಿಂತರು . ಬಳಿಕ ಮುಂಬಯಿ ನಲ್ಲೆ ಹುಟ್ಟಿ ಬೆಳೆದ ರವಿ ಶಾಸ್ತ್ರೀ ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದರು.
ಹನ್ನೆರಡು ವರ್ಷಗಳ ಹಿಂದೆ ಪತ್ನಿ ಸಮೇತ ಸ್ಥಳಕ್ಕೆ ಭೇಟಿ ನೀಡಿದ್ದ ಅವರು ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೀರ್ಘಕಾಲ ಯಾವುದೇ ಸಮಸ್ಯೆಯಿಲ್ಲದೆ ಉಳಿದುಕೊಂಡಿದ್ದ ದಂಪತಿಗಳು ನಂತರ ಅವರ ಮಗಳು ಅಲೈಕಾವನ್ನು ಪಡೆದರು. ಅಂದಿನಿಂದ ವಾರ್ಷಿಕವಾಗಿ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತಿದ್ದಾರೆ. ಕಳೆದ ಮೂರು ವರ್ಷಗಳ ಕೋವಿಡ್ ಲಾಕ್ ಡೌನ್ ಹಿನ್ನೆಲೆ ಹಾಗು ವಲ್ಡ್ ಕಪ್ ಒತ್ತಡಗಳಿಂದ ಮೂರು ವರ್ಷಗಳು ಬರಲು ಸಾಧ್ಯವಾಗಲಿಲ್ಲ
ಮುಂದಿನ ತಿಂಗಳಲ್ಲಿ ನಡೆಯುವ ಐಪಿಎಲ್ ಪಂದ್ಯಾಟದ ಬಗ್ಗೆ ಉಲ್ಲೇಖಿಸಿದ ರವಿ ಶಾಸ್ತ್ರಿ ಹತ್ತು ಟೀಂ ಗಳಿದ್ದು ಕ್ರೀಡಾ ಕ್ಷೇತ್ರ ವೇ . ಈಗಾಗಲೇ ಅದರ ಪೂರ್ವ ತಯಾರಿಗಳು ನಡೆಯುತಿದೆ .ಐಪಿಎಲ್ ನಲ್ಲಿ ಯುವ ಆಟಗಾರರಿಗೆ ತೆರೆದಿಟ್ಟ ವೇದಿಕೆಯಾಗಿದ್ದು ದಾಖಲೆಗಳಿಗೆ ಸ್ಪೂರ್ತಿದಾಯಕವಾಗಿದೆ. ಮುಂದೆ ನಡೆಯಲಿರುವ ವರ್ಲ್ಡ್ ಕಪ್ ನಲ್ಲಿ ಉತ್ತಮ ಕ್ರೀಡಾಪಟುಗಳಿಗೆ ಭಾಗವಹಿಸಲು ಐಪಿಎಲ್ ಬಹುದೊಡ್ಡ ವೇದಿಕೆ ಕಲ್ಪಿಸುತ್ತಿದೆ.
ಭಾರತೀಯ ಕ್ರಿಕೆಟ್ ತಂಡದ ಉಲ್ಲೇಖಿಸಿದ ರವಿ ಶಾಸ್ತ್ರಿ ಕ್ರೀಡೆಯಲ್ಲಿ ಏರಿಳಿತಗಳು ಸರ್ವೆ ಸಾಮಾನ್ಯ ವಾಗಿದೆ. ಆದರೆ ಅದರಲ್ಲೂ ಉತ್ತಮ ಪ್ರತಿಭೆ ತೋರುತ್ತಿರುವುದು ಶ್ಲಾಘನೀಯ ಎಂದರು. ಕ್ರಿಕೇಟಿಗ ಕೆ.ಎಲ್ ರಾಹುಲ್ ಉಲ್ಲೇಖಿಸಿದ ರವಿ ಶಾಸ್ತ್ರಿ ಉತ್ತಮ ಶ್ರೇಯಾಂಕ ದಲ್ಲಿ ಆಡುತಿದ್ದಾನೆ .ಮುಂದಿನ ಎಂಟು ವರ್ಷಗಳಲ್ಲಿ ಆತನಿಗೆ ಉತ್ತಮ ಭವಿಷ್ಯವಿದೆ ಎಂದರು.
ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಆಲೌರೌಂಡರ್ಗಳ ಕೊರತೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ರವಿ ಶಾಸ್ತ್ರಿ ಜಡೇಜ ಹಾಗೂ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದಾರೆ . ಕ್ರೀಡೆಯಲ್ಲಿ ಸೋಲು ಗೆಲುವು ಸಹಜವಾಗಿದೆ ಗಾಯಾಳು ರಿಷಭ್ ಪಂತ್ ಅದ್ಭುತ ಕ್ರಿಕೆಟ್ ಆಟಗಾರ ಅದಷ್ಟು ಬೇಗ ಪೀಲ್ಡ್ ಗೆ ಮರಳಲಿದ್ದು , ಅವರ ಬರುವಿಕೆಯನ್ನು ಭಾರತ ಮಾತ್ರವಲ್ಲದೆ ಇಡಿ ವಿಶ್ವವೇ ಕಾಯುತ್ತಿದೆ . ಮುಂದಿನ ವಿಶ್ವಕಪ್ ನಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ ವಹಿಸಲಿದ್ದು ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ ಎಂದರು