ಬಂದಾರು- ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವರ ಪೂಜಾ ಪುನರಾರಂಭದ 21 ನೇ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಇದೇ ಬರುವ ಮಾ. 30 ರಂದು ನಡೆಯಲಿದೆ.
ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಸೇವಾಟ್ರಸ್ಟ್ (ರಿ) ಪೆಲತ್ತಿಮಾರು ಬಂದಾರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಬಂದಾರು ಒಕ್ಕೂಟ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಬಂದಾರು, ಹಾಗೂ ಜನಜಾಗೃತಿ ಗ್ರಾಮ ಸಮಿತಿ ಬಂದಾರು ಇವಗಳ ಸಹಕಾರದೊಂದಿಗೆ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಕ್ಷೇತ್ರದಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳು ವೇ. ಸೀತಾರಾಮ ಮುಚ್ಚಿಂತ್ತಾಯರ ನೇತೃತ್ವದಲ್ಲಿ ನಡೆಯಲಿದ್ದು, ವಾರ್ಷಿಕೋತ್ಸವದ ಮುನ್ನುಡಿಯಾಗಿ ದೇವಾಲಯದಲ್ಲಿ ಬೆಳಗ್ಗೆ ಪ್ರಾರ್ಥನೆ, ಗಣಹೋಮ, ಕಲಶ ಪ್ರಧಾನ ಹೋಮ ನಡೆಯಲಿದೆ. ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಮಹಾಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ವಾರ್ಷಿಕೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ದುರ್ಗಾಪೂಜೆ, ರಂಗಪೂಜೆ, ನಡೆಯಲಿದ್ದು, ಭಜನಾ ಸಂಕೀರ್ತನೆ ಮೊಳಗಲಿದೆ. ಇನ್ನೂ ರಾತ್ರಿ 9 ರಿಂದ ‘ಮಂದಾರ’ ಕಲಾವಿದರು ಉಜಿರೆ ಅರ್ಪಿಸುವ ಗುಣಪಾಲ್ ಎಂ ಎಸ್ ಉಜಿರೆ ಸಾರಥ್ಯದ, ಹರೀಶ್ ಪಡುಬಿದ್ರಿ ರಚಿಸಿ ಚಲನಚಿತ್ರ ನಟ ರಂಗ್‌ದ ರಾಜೆ ಎಲ್. ಎನ್ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸಿರುವ, ಪ್ರಶಸ್ತಿ ವಿಜೇತ ತುಳು ಹಾಸ್ಯಮಯ ನಾಟಕ “ಅಜ್ಜಿಗ್ ಎರ್ಲಾ ಇಜ್ಜಿ” ಪ್ರದರ್ಶನಗೊಳ್ಳಲಿದೆ.
ಬಳಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ (ರಿ) ಪೆಲತ್ತಿಮಾರಿನ ಅಧ್ಯಕ್ಷರಾದ ಸುಂದರ ಗೌಡ ನಿನ್ನಿಕಲ್ಲು ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಶ್ರೀ ಕ್ಷೇತ್ರ ಧ.ಗ್ರಾ.ಯೋ.ಬಿ.ಸಿ.ಟ್ರಸ್ಟ್ (ರಿ) ಗುರುವಾಯನಕೆರೆ ಇದರ ಯೋಜನಾಧಿಕಾರಿಯಾದ ಯಶವಂತ್ ಪಾಲ್ಗೋಳ್ಳಲಿದ್ದಾರೆ. ಇನ್ನೂ ಧಾರ್ಮಿಕ ಉಪನ್ಯಾಸವನ್ನು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಚಂದ್ರ ಮೊಗೇರ, ನೀಡಲಿದ್ದಾರೆ. ಆ ಮೂಲಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕೋತ್ಸವವು ಸಂಪನ್ನಗೊಳ್ಳಲಿದೆ.