ವಿದೇಶಕ್ಕೆ ತೆರಳಲಿದ್ದ ಮಗಳನ್ನು ಏರ್ಪೋರ್ಟ್ ಗೆ ಬಿಡಲು ತೆರಳಿದ್ದ ವೇಳೆ ಮನೆಗೆ ಕನ್ನ ಹಾಕಿದ ಕಳ್ಳರು –ಕಹಳೆ ನ್ಯೂಸ್
ಬಂಟ್ವಾಳ: ವಿದೇಶಕ್ಕೆ ತೆರಳಲಿದ್ದ ಮಗಳನ್ನು ಏರ್ಪೋರ್ಟ್ ಗೆ ಬಿಡಲು ತೆರಳಿದ್ದ ವೇಳೆ ಮನೆಗೆ ಕಳ್ಳರು ನುಗ್ಗಿ ನಗ-ನಗದನ್ನು ದೋಚಿ ಪರಾರಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಬದಲ್ಲಿ ನಡೆದಿದೆ.
ವೀರಕಂಬ ಬೊಣ್ಯಕುಕ್ಕು ಜನತಾ ಕಾಲೋನಿ ನಿವಾಸಿ ಮಹಮ್ಮದ್ ಮುಸ್ಲಿಯಾರ್ರವರು ಕುಟುಂಬ ಸಮೇತರಾಗಿ ಮಾ. 27ರಂದು ರಾತ್ರಿ ವಿದೇಶಕ್ಕೆ ತೆರಳಲಿದ್ದ ಮಗಳನ್ನು ಮಂಗಳೂರು ಏರ್ಪೋರ್ಟ್ ಗೆ ಬಿಟ್ಟು ಬರಲು ತೆರಳಿದ್ದರು.
ಮರಳಿ ಮನೆಗೆ ಬಂದು ನೋಡಿದಾಗ ಬಾಗಿಲು ತೆರೆದಿತ್ತಲ್ಲದೇ ಮನೆಯ ಛಾವಣಿಗೆ ಏಣಿ ಇಟ್ಟು ಮನೆಯೊಳಗೆ ನುಗ್ಗಿ ಕಪಾಟಿನ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.